ಸಾರಿಗೆ ನೌಕರರ ಹೋರಾಟವನ್ನು ಹತ್ತಿಕ್ಕಿ ಹೋರಾಟಗಾರರನ್ನು ಬಂದಿಸಿದ ಪೊಲೀಸರು ಫ್ರೀಡಂ ಪಾರ್ಕ್ಬೆ…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆoಗಳೂರು : ಸಾರಿಗೆ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಕಳೆದ 4 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಆದರೆ ಸರ್ಕಾರ ಸಾರಿಗೆ ನೌಕರರಿಗೆ ಮಲತಾಯಿ ಧೋರಣೆ ಮಾಡುತ್ತಿದ್ದು.
ಹೋರಾಟವನ್ನು ಹತ್ತಿಕ್ಕಲು ಸುಳ್ಳು ಭರವಸೆಗಳನ್ನು ಕೊಟ್ಟು ಕೆಲವು ಹೋರಾಟಗಳನ್ನು ತಡೆದು ತದನಂತರ ಮತ್ತೆ 2023ರ ಚುನಾವಣೆ ಸಮಯದಲ್ಲಿ ಮಾಡಿದ ಹೋರಾಟವನ್ನು ತಡೆಗಟ್ಟಿ ನೌಕರರ ಮೇಲೆ ಹೋರಾಟಗಾರರ ಮೇಲೆ ಸುಳ್ಳು ಪೊಲೀಸು ಕೇಸ್ ಗಳು ದಾಖಲು ಮಾಡಿ ಹೋರಾಟವನ್ನು ಕುಗ್ಗಿಸುವ ಪ್ರಯತ್ನ ಮಾಡಿ ಪ್ರತಿ ಒಂದು ಹೋರಾಟದಲ್ಲಿ ಇದೆ ರೀತಿ ಸರ್ಕಾರ ನಡೆದುಕೊಂಡಿದೆ ಹಾಗೆ 2023 ರಲ್ಲಿ ಕಾಂಗ್ರೆಸ್ ಸರಕಾರ ಚುನಾವಣೆ ಸಮಯದಲ್ಲಿ ಸಾರಿಗೆ ನೌಕರರ ಪರವಾಗಿ ಪ್ರಣಾಳಿಕೆಯಲ್ಲಿ ಒಳ್ಳೆಯ ಭರವಸೆ ನೀಡಿದ್ದರು.
ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಕೊಟ್ಟ ಮಾತಿನಂತೆ ನಡೆಯದೆ ಮತ್ತೆ ಸಾರಿಗೆ ನೌಕರರಿಗೆ ಅನ್ಯಾಯ ಮಾಡಿದ್ದಾರೆ . ಇದನ್ನು ಖಂಡಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಸಂಘಟನೆ ನೇತೃತ್ವದಲ್ಲಿ ಸಾರಿಗೆ ನೌಕರರು ಮತ್ತೆ ದಿನಾಂಕ 04/03/2024 ರಂದು ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹೋರಾಟಕ್ಕೆ ಕರೆ ನೀಡಿದ್ದು ನಮ್ಮ ರಾಜ್ಯದ ಸುತ್ತ ಮುತ್ತಲಿನ ಜಿಲ್ಲೆಯ ಸಾರಿಗೆ ನೌಕರರು ಮತ್ತು ಕುಟುಂಬಸ್ಥರು ಹೋರಾಟಕ್ಕೆ ಬರುತ್ತಿದ್ದಾರೆ.
ಇದನ್ನು ಗಮನಿಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು ಸರಕಾರಕ್ಕೆ ತಿಳಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹೋರಾಟವನ್ನು ಹತ್ತಿಕ್ಕಲು ಮುಖ್ಯ ಪೊಲೀಸ್ ಅಧಿಕಾರಿಗಳನ್ನು ಬಿಟ್ಟು ಹೋರಾಟ ಮಾಡುತ್ತಿರುವ ಹೋರಾಟಗಾರರು ಮತ್ತು ನೌಕರರನ್ನು ಬಂಧಿಸಿದ್ದಾರೆ.
ಬಂಧನಕ್ಕೆ ಒಳಗಾದವರು (ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಕರ)
(ತಲಾಶಾಷನ್ ಮೋಹನ್ ಕೂಟದ ಸಂಘಟನಾ ಕಾರ್ಯದರ್ಶಿ)
(ಮಹೇಶ ಶಿಗೀಹಳ್ಳಿ ರಾಜ್ಯದ್ಯಕ್ಷರು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ)) ಹಾಗು ಇನ್ನೂ ಹಲವು ಮುಖಂಡರು ಹೋರಾಟಗಾರರು ನೌಕರರು ಉಪಸ್ಥಿತರಿದ್ದರು.***********************






