ಪ್ರಕೃತಿ ಬೆಳಗಾವಿ

*ಮಟಕಾ ಅಡ್ಡೆ ಮೇಲೆ ದಾಳಿ; ಓರ್ವನ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ರವಿವಾರ ಪೇಟೆಯ ಸಿದ್ರಾಮೇಶ್ವರ ಅಗೋ ಸೆಂಟರ್ ಎದುರು ಮಟಕಾ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಪಂಕಜ ಮೋಹನ ಜಾಧವ (34), ನಿವಾಸಿ ಕಾಮತ ಗಲ್ಲಿ ಎಂಬಾತ ಬಂಧಿತ ಆರೋಪಿ. ಈತನಿಂದ 1,250 ರು.ನಗದು ಹಾಗೂ ಮಟಕಾ ಓಸಿ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.***************************

Leave a Reply

Your email address will not be published. Required fields are marked *

Back to top button