ಪ್ರಕೃತಿ ಬೆಳಗಾವಿ

*ಕರಾಟೆ ಸ್ಪರ್ಧೆಯಲ್ಲಿ ಯೋಗೇಶ್ ಲಮಾಣಿ ರಾಜ್ಯಕ್ಕೆ ಪ್ರಥಮ*

ಪ್ರಕೃತಿ ಬೆಳಗಾವಿ ಸುದ್ದಿ : ಹುಬ್ಬಳ್ಳಿ : ಲ್ಯಾಮಿಂಗ್ಟನ್ ಬಾಲಕರ ಪ್ರೌಢ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿ ಯೋಗೇಶ್ ಲಮಾಣಿ ಅವರು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಅವರು ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ 17 ವರ್ಷದ ಒಳಗಿನ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾನೆ.

ಶಾಲಾ ಸಮಿತಿಯ ಕಾರ್ಯದರ್ಶಿ ಶಶಿಧರ್ ಸಾಲಿ , ಮುಖ್ಯ ಶಿಕ್ಷಕಿ ಸುನಿತಾ ಮುಲ್ಕಿಪಾಟೀಲ, ದೈಹಿಕ ಶಿಕ್ಷಕ ಡಿ ಜೆ ಜಾಧವ, ಹಿರಿಯ ಶಿಕ್ಷಕಿ ಶಕುಂತಲಾ ಎಸ್ ಹೂಗಾರ್, ಶಿಕ್ಷಕಿಯರಾದ ಭಾರತಿ ದೊಡ್ಡಮನಿ, ವೀಣಾ ಸಾಸನೂರ ಬಿ.ಜಿ ಕರಿಗಾರ ಆರ್.ಸಿ ಕಾಡಶೆಟ್ಟಿ , ಶಿಕ್ಷಕರು , ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಯೋಗೇಶನ ಸಾಧನೆಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ, ಸಂತಸ ದೊಂದಿಗೆ ಹೆಮ್ಮೆಯ ಅಭಿಮಾನದ ಹೃದಯ ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ರಾಷ್ಟ್ರ ಮಟ್ಟದಲ್ಲೂ ಕರಾಟೆಯಲ್ಲಿ ಅಮೋಘ ಪ್ರದರ್ಶನ ನೀಡಿ ಹುಬ್ಬಳ್ಳಿ ಹಾಗೂ ಲ್ಯಾಮಿಂಗ್ಟನ್ ಬಾಲಕರ ಪ್ರೌಢ ಶಾಲೆಯ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಲಿ ಎಂದು ಶುಭ ಕೋರಿದ್ದಾರೆ.**************************

Leave a Reply

Your email address will not be published. Required fields are marked *

Back to top button