ಪ್ರಕೃತಿ ಬೆಳಗಾವಿ
*ಮಾರ್ಕೆಟ್ ಪೊಲೀಸರ ದಾಳಿ: ಚಾಕು ಸಮೇತ ವ್ಯಕ್ತಿ ವಶಕ್ಕೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಪಿಡಬ್ಲ್ಯೂಡಿ ಕ್ವಾರ್ಟರ್ಸ್ ಬಳಿ ಹರಿತವಾದ ಚಾಕು ಹೊಂದಿದ್ದ ರಾಮನಗರ ನಿವಾಸಿ ಲಕ್ಷ್ಮಣ ಬಸಪ್ಪ ಸುತಾರ (47) ಎಂಬಾತನನ್ನು ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿಎಸ್‌ಐ ಮಣಿಕಂಠ ಪೂಜಾರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಚಾಕು ವಶಪಡಿಸಿಕೊಂಡು ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.***************************






