ಕನ್ನಡ ಕಡ್ಡಾಯ ನಿಯಮ ಉಲ್ಲಂಘನೆ: ಪುರಸಭೆ ಅಧಿಕಾರಿಗಳಿಂದ ನೂರಾರು ನಾಮಫಲಕಗಳ ತೆರವು…!!
ಪ್ರಕೃತಿ ಬೆಳಗಾವಿ ಸುದ್ದಿ : ಘಟಪ್ರಭಾ : ಅಂಗಡಿಗಳ ಮೇಲೆ ಹಾಕಿರುವ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯ ನಿಯಮ ಜಾರಿಯಾದ ಹಿನ್ನಲೆಯಲ್ಲಿ ಶನಿವಾರ ಪುರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅನ್ಯ ಭಾಷೆಗಳಲ್ಲಿ ಹಾಕಲಾಗಿದ್ದ ನಾಮಫಲಕಗಳನ್ನು ತೆರವುಗೊಳಿಸಿದರು.
ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯ ಕಾಯ್ದೆ ಜಾರಿಯಾದರೂ ಸಹ ಜನರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ, ಅದರ ಜೊತೆಗೆ ಅಧಿಕಾರಿಗಳು ಕೂಡ ಸದರಿ ನಿಯಮ ಜಾರಿ ಮಾಡುವಲ್ಲಿ ಹಿಂದೇಟು ಹಾಕುತ್ತಿರುವ ಹಿನ್ನಲೆಯಲ್ಲಿ ಅನೇಕ ಕನ್ನಡಪರ ಹೋರಾಟಗಾರರು ಪ್ರತಿಭಟಣೆಗೆ ಇಳಿದಿರುವ ಕಾರಣ ಎಚ್ಚೆತ್ತಕೊಂಡ ಅಧಿಕಾರಿಗಳು ಕನ್ನಡ ಕಡ್ಡಾಯ ಕಾಯ್ದೆ ಜಾರಿ ಮಾಡಲು ಮುಂದಾಗಿದ್ದಾರೆ.
ಈ ನಿಮಿತ್ಯ ಇಂದು ಘಟಪ್ರಭಾ ಪೊಲೀಸರ ಬಂದೋಬಸ್ತಿಯಲ್ಲಿ ಪಟ್ಟಣದಲ್ಲಿ ಕಾರ್ಯಾಚರಣೆಗಳಿದ ಅಧಿಕಾರಿಗಳು ಅನೇಕ ಅಂಗಡಿಗಳ ಮೇಲಿನ ಅನ್ಯ ಭಾಷೆಯಲ್ಲಿದ್ದ ನೂರಾರು ನಾಮ ಫಲಕಗಳನ್ನು ತೆರವುಗೊಳಿಸಿ ಕೂಡಲೇ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಅಕ್ಷರಗಳನ್ನು ನಮೂದಿಸಿ ನಾಮಗಳನ್ನು ಅಳವಡಿಸಲು ಸೂಚಿಸಿದರು.
ಕಾರ್ಯಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಎಂ.ಎಸ್.ಪಾಟೀಲ, ಸಿ.ಪಿ.ಐ ಬಸವರಾಜ ಕಾಮನಬೈಲ್, ಬಿ.ಎಸ್.ನಾಯಿಕ, ಪುರಸಭೆ ಸಿಬ್ಬಂದಿ ಮಹಾಂತೇಶ ದೊಡ್ಡಲಿಂಗಪ್ಪಗೋಳ ಸೇರಿದಂತೆ ಅನೇಕರು ಇದ್ದರು.
ಘಟಪ್ರಭಾ: ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಬಳಸದೇ ಇರುವ ಅಂಗಡಿಗಳ ನಾಮಫಲಕಗಳನ್ನು ತೆರವುಗೊಳಿಸುತ್ತಿರುವ ಅಧಿಕಾರಿಗಳು ಹಾಗೂ ಪೊಲೀಸರು.*****************************






