ಪ್ರಕೃತಿ ಬೆಳಗಾವಿ

ಸಮುದಾಯ ಭವನ ನಿರ್ಮಾಣಕ್ಕೆ ಸಚಿವೆ ಗುದ್ದಲಿ ಪೂಜೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸಹ್ಯಾದ್ರಿ ನಗರದಲ್ಲಿರುವ ಶ್ರೀ ಮಹಾಬಳೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ, ಉದ್ಯಾನವನ ಹಾಗೂ ಬೊರವೆಲ್ ಹಾಕಿಸುವ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ಮಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಅರ್ಚಕರಾದ ಅಡವಯ್ಯ ಹಿರೇಮಠ್, ವಿಜಯ ಹಿರೇಮಠ್, ಮಹಾಬಲೇಶ್ವರ ದೇವಸ್ಥಾನ ಸಮಿತಿಯ ಸದಸ್ಯರಾದ ಅಣ್ಣಯ್ಯ ಪಾಟೀಲ, ರಾಜು ಡೂಗನವರ, ಸುರೇಶ್ ಘೋರ್ಪಡೆ, ಸಂಜು ಅಂಗಡಿ, ಗೋಪಾಲ ಪಂಚಾಳ, ಹರೀಶ್ ಹಂಡೆ, ಮಲ್ಲಪ್ಪಾ ಮಾಕಿ, ಗುರುಸಿದ್ದ ಪಾಟೀಲ, ಅಡವಯ್ಯ ಸ್ವಾಮಿಗಳು, ರತ್ನಾ ಕುಲಕರ್ಣಿ, ಸುರಭಿ ಜಡಗಿ, ರಾಜಶ್ರೀ, ಅಶ್ವಿನಿ ಹಾವನ್ನಗೋಳ, ಸ್ನೇಹಾ ಪಾಟೀಲ ಉಪಸ್ಥಿತರಿದ್ದರು.*************************

Back to top button