ಪ್ರಕೃತಿ ಬೆಳಗಾವಿ

ರಾಯಬಾಗ ಸರ್ಕಾರಿ ಅಧಿಕಾರಿಗಳ ವಿರುದ್ಧ ಬ್ರಷ್ಟಾಚಾರ ಆರೋಪ ಡಿ ಎಸ್ ಎಸ್ ರಾಜ್ಯಾಧ್ಯಕ್ಷ ರಾಜು ತಳವಾರ ಆಕ್ರೋಶ…!!

ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ ತಾಲೂಕಿನ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ರಾಜು ತಳವಾರ ಆಕ್ರೋಶ ವ್ಯಕ್ತಪಡಿಸಿದರು

ರಾಯಬಾಗ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ರಾಯಬಾಗದ ಸರ್ಕಾರಿ ಕಚೇರಿಗಳಾದ PWD ಇಲಾಖೆ ಸಬ್ ರಿಜಿಸ್ಟ್ರಾರ್, ನೀರಾವರಿ ಇಲಾಖೆ, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಅರಣ್ಯ ಇಲಾಖೆ ತಹಶೀಲ್ದಾರ ಕಚೇರಿ ಮತ್ತು ಪಶು ಇಲಾಖೆ ಇವೆಲ್ಲ ಕಛೇರಿಗಳಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದರು

ಬ್ರಷ್ಟಾಚಾರ ನಡೆಯುತ್ತಿದೆ ಎಂದು ಈ ಎಲ್ಲಾ ಅಧಿಕಾರಿಗಳ ವಿರುದ್ಧ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು ಅವರು ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ ಆದಕಾರಣ ಅಂತಹ ಅಧಿಕಾರಿಗಳ ವಿರುದ್ದ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಹೇಳಿದರು

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ರಾಜು ತಳವಾರ ಜಿಲ್ಲಾ ಸಂಚಾಲಕರಾದ ಜ್ಯೋತಿಬಾ ಮಾನೆ ರಾಯಬಾಗ ತಾಲೂಕು ಅಧ್ಯಕ್ಷ ಸಿದ್ದು ಕಾಂಬಳೆ ಹಾಗೂ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.******************************

Back to top button