ಪ್ರಕೃತಿ ಬೆಳಗಾವಿ

ಲೋಕಸಭೆ ಸಾರ್ವತ್ರಿಕ ಚುನಾವಣೆ-2024**ಚುನಾವಣಾ ಕೇಂದ್ರಿಕೃತ ನಿಯಂತ್ರಣ ಕೊಠಡಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಭೇಟಿ; ಅಧಿಕಾರಿಗಳೊಂದಿಗೆ ಸಭೆ*

ಧಾರವಾಡ ಮಾರ್ಚ್.18:* ಚುನಾವಣೆಯ ಕೇಂದ್ರಿಕೃತ ನಿಯಂತ್ರಣ ಕೊಠಡಿಯು ಚುನಾವಣಾ ಕರ್ತವ್ಯ ನಿರ್ವಹಿಸುವ ಎಲ್ಲ ತಂಡಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಮಾಹಿತಿ ನೀಡಬೇಕು. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿ, ಆದೇಶ ಮಾಡಿದರೂ ಕೆಲವು ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಂಡಿಲ್ಲ. ಗೈರು ಹಾಜರಾಗಿರುವ ಇಂತ ಅಧಿಕಾರಿ, ಸಿಬ್ಬಂದಿಗಳಿಗೆ ತಕ್ಷಣ ಕಾರಣ ಕೆಳಿ ನೋಟಿಸ್ ಜಾರಿ ಮಾಡಿ, ನೊಡಲ್ ಅಧಿಕಾರಿಗಳು ಜಿಲ್ಲಾ ಚುನಾವಣಾ ಕಾರ್ಯಾಲಯಕ್ಕೆ ವರದಿ ಸಲ್ಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ನಿರ್ದೇಶಿಸಿದರು. ಅವರು ಇಂದು ಬೆಳಿಗ್ಗೆ ಲೋಕಸಭೆ ಸಾರ್ವತ್ರಿಕ ಚುನಾವಣೆ ನಿಮಿತ್ಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆರಂಭಸಿರುವ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕೇಂದ್ರಿಕೃತ ನಿಯಂತ್ರಣ ಕೊಠಡಿ (ಸೆಂಟ್ರ್ಲಲೈಜಡ ಕಂಟ್ರೋಲ್ ರೂಂ)ಗೆ ಬೇಟಿ ನೀಡಿ, ಪರಿಶೀಲಿಸಿದ ನಂತರ ಅಧಿಕಾರಿ, ಸಿಬ್ಬಂದಿಗಳ ಸಭೆ ಜರುಗಿಸಿ ಮಾತನಾಡಿದರು.ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಚುನಾವಣಾ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕೊಟ್ಟಿರುವ ಕೆಲಸವನ್ನು ನೆಟ್ಟಗೆ ಮಾಡಿ, ಚುನಾವಣಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಅವರು ಖಡಕ್ಕಾಗಿ ಸೂಚಿಸಿದರು. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿ ಆದೇಶ ಮಾಡಿದರೂ ಮತ್ತು ಮಾದರಿ ನೀತಿ ಸಂಹಿತೆ ಜಾರಿ ಆಗಿ ಎರಡು ದಿನ ಕಳೆದರೂ ಕೆಲವು ಅಧಿಕಾರಿ, ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಇನ್ನೂ ಹಾಜರಾಗದೆ ಇರುವುದು ಕಂಡುಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರತಿ ನೊಡಲ್ ಅಧಿಕಾರಿ ತನ್ನ ಅಧೀನದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ನಿಯೋಜಿತವಾಗಿರುವ ಸಿಬ್ಬಂದಿಗಳು ಹಾಜರಾಗಿ, ವರದಿ ಮಾಡಿಕೊಂಡಿರದಿದ್ದಲ್ಲಿ, ಅವರಿಗೆ ತಕ್ಷಣ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು. ಮತ್ತು ಈ ಕುರಿತ ವರದಿಯೊಂದಿಗೆ ಆರ್ ಪಿ ಐ ಆಕ್ಟ್ ಪ್ರಕಾರ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಶಿಪಾರಸ್ಸು ಮಾಡಬೇಕೆಂದು ಸೂಚಿಸಿದರು.ಪ್ರತಿ ತಂಡಕ್ಕೆ ಶಿಪ್ಟ್ ಪ್ರಕಾರ ನಿಯೋಜಿಸಲಾಗಿದೆ. ದಿನದ 24 ಗಂಟೆ, ನಿಯೋಜಿತರು ಇದ್ದು ಕಾರ್ಯನಿರ್ವಹಿಸಬೇಕು. ಎಂಸಿಎಂಸಿ,ಎಂ.ಎಂ.ಸಿ, ಎಫ್.ಎಸ್.ಟಿ, ಎಸ್.ಎಸ್.ಟಿ, ವಿ.ಎಸ್.ಟಿ ಮತ್ತು ಜಿಪಿಎಸ್, ಸಿ-ವಿಜಿಲ್, ಸಹಾಯವಾಣಿ ಮತ್ತು ಸಿಸಿಟಿವಿ ಉಸ್ತುವಾರಿ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ತಮಗೆ ವಹಿಸಿರುವ ಕಾರ್ಯಗಳನ್ನು ನಿರಂತರವಾಗಿ ತೀವ್ರ ನಿಗಾವಹಿಸಿ ನಿರ್ವಹಿಸಬೇಕು. ನೊಡಲ್ ಅಧಿಕಾರಿಗಳಾದ ಡಾ.ಸಂತೋಷ ಬಿರಾದಾರ, ಮಂಜುನಾಥ ಸುಳ್ಳೊಳ್ಳಿ ಹಾಗೂ ಗೋಪಾಲ ಲಮಾಣಿ ಅವರು ಈ ತಂಡಗಳಿಗೆ ಸೂಕ್ತ ಮಾಹಿತಿ ಮತ್ತು ತರಬೇತಿಯನ್ನು ನೀಡಬೇಕೆಂದು ಅವರು ಸೂಚಿಸಿದರು.ಸೋಶಿಯಲ್ ಮಿಡಿಯಾ ಹಾಗೂ ಮಾಧ್ಯಮಗಳಿಗೆ ಸಂಬಂಧಿಸಿದ ತಂಡಗಳು ಹೆಚ್ಚು ಆಕ್ಟೀವ್ ಆಗಿ ಕೆಲಸ ಮಾಡಬೇಕು. ರಾಜಕೀಯ ಪಕ್ಷ, ಮುಖಂಡರು, ಬೆಂಬಲಿಗರು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿಗಳಿಗೆ ಸಂಬಂಧಿಸಿದ ವಾಟ್ಸಪ್, ಪೇಸ್ ಬುಕ್, ಇನ್‍ಸ್ಟಾಗ್ರಾಂ ದಂತಹ ಎಲ್ಲ ಸೋಶಿಯಲ್ ಮಿಡಿಯಾಗಳನ್ನು ನಿರಂತರವಾಗಿ ಪರಿಶೀಲಿಸಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಆಯಾ ನೊಡಲ್ ಅಧಿಕಾರಿಗಳ ಗಮನಕ್ಕೆ ತಕ್ಷಣ ತರಬೇಕೆಂದು ಮತ್ತು ಅದನ್ನು ಸರಿಯಾಗಿ ದಾಖಲಿಸಬೇಕೆಂದು ಅವರು ತಿಳಿಸಿದರು.ಚುನಾವಣಾ ಕರ್ತವ್ಯದಲ್ಲಿ ಯಾರಿಂದಲೂ ನಿರ್ಲಕ್ಷ್ಯ ಸಲ್ಲದು. ಕಂಟ್ರೋಲ್ ರೂಂ ಕೆಲಸಕ್ಕೆ ಇವತ್ತಿನವರೆಗೆ ಗೈರಾಗಿರುವ ಸಿಬ್ಬಂದಿಗಳಿಗೆ ತಕ್ಷಣ ಕಾರಣಕೇಳಿ ನೋಟಿಸ್ ಜಾರಿ ಮಾಡಿ, ವರದಿ ನೀಡಬೇಕು. ಎಲ್ಲರೂ ಕೂಡಿ ಕೆಲಸ ಮಾಡಿದರೆ, ತಮ್ಮತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಉತ್ತಮ ಎಂದು ಅವರು ತಿಳಿಸಿದರು.ಸಭೆಯಲ್ಲಿ ನೊಡಲ್ ಅಧಿಕಾರಿಗಳಾದ ಮೋನಾ ರಾವುತ್, ರೇμÁ್ಮ ತಾಳಿಕೋಟಿ, ಡಾ. ಸಂತೋಷ ಬಿರಾದಾರ, ಗೋಪಾಲ ಲಮಾಣಿ, ಮೀನಾಕುಮಾರಿ, ಮಂಜುನಾಥ ಸುಳ್ಳೊಳ್ಳಿ, ಸುರೇಶ ಹಿರೇಮಠ ಹಾಗೂ ಎಸ್.ಎಂ ಹುಡೇದಮನಿ, ಅನಿಸ್ ಮತ್ತು ಇತರರು ಮಾತನಾಡಿ, ತಮ್ಮ ತಂಡಗಳ ವಿವರ ಸಲ್ಲಿಸಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಸಿಲ್ದಾರ ಡಾ.ಡಿಎಚ್ ಹೂಗಾರ, ಹೆಸ್ಕಾಂ ಇಇಎಂ,ಎಂ ನದಾಫ್, ಶಿರಸ್ತೆದಾರ ಪ್ರಶಾಂತ ನವಲೆ, ಸೈಯದ್ ಬನ್ನಿಮಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Back to top button