ಪ್ರಕೃತಿ ಬೆಳಗಾವಿ

ರಾಯಚೂರನಲ್ಲಿ ನಡೆಯುತ್ತಿರುವ ವಾಲ್ಮೀಕಿ ನಾಯಕ ಸಮುದಾಯದ ನ್ಯಾಯಯುತವಾದ 15 ಬೇಡಿಕೆಗಳಿಗಾಗಿ ಕಳೆದ 37 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ…!!

ಪ್ರಕೃತಿ ಬೆಳಗಾವಿ ಸುದ್ದಿ : ಇವತ್ತು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯಿಂದ ಬೆಂಬಲ ವ್ಯಕ್ತಪಡಿಸಲಾಯಿತು ಮತ್ತು ವಾಲ್ಮೀಕಿ ನಾಯಕ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಳೆಎಳೆಯಾಗಿ ತಿಳಿಸಿ ಸರ್ಕಾರದ ವಿರುದ್ಧ ತೋಡೆತಟ್ಟುವ ಹೋರಾಟ ಆಗಬೇಕು ಎಂದು ತಿಳಿಸಿ ಪ್ರಭಾವಿ ರಾಜಕಾರಣಿಗಳ ಬೆನ್ನು ಹತ್ತುವುದನ್ನು ಬಿಟ್ಟು ವಾಲ್ಮೀಕಿ ನಾಯಕ್ ಸಮುದಾಯದ ಎಳಿಗೆಗಾಗಿ ಅಭಿವೃದ್ದಿಗಾಗಿ ನಮ್ಮವರ ರಕ್ಷಣೆಗೆ ನಿಲ್ಲೋಣ ನಮ್ಮತನವನ್ನು ನಮ್ಮವರನ್ನು ಸಮುದಾಯವನ್ನು ರಕ್ಷಿಸುವಲ್ಲಿ ಬೆನ್ನು ಹತ್ತೋಣ ಎಂದು
ಮಹೇಶ ಶಿಗೀಹಳ್ಳಿ (ರಾಜ್ಯಾಧ್ಯಕ್ಷರು) ತಿಳಿಸಿದರು.

ಮತ್ತು ಈ ಸಂದರ್ಬದಲ್ಲಿ ಬೆಳಗಾವಿ ನಗರ ಅಧ್ಯಕ್ಷ ಮಂಜು ತಳವಾರ್ ಮತ್ತು ಬೆಳಗಾವಿ ಜಿಲ್ಲೆ ಸಂಚಾಲಕ ಜಾನೇಶ್ ರವರು ವಿವಿಧ ಜಿಲ್ಲೆಯ ನಾಯಕರು ಮತ್ತು ಹೊರ ರಾಜ್ಯದ ವಾಲ್ಮೀಕಿ ಸಮುದಾಯದ ನಾಯಕರು ಮತ್ತು ಬಂಧುಗಳು ಹಾಗೂ ರಾಯಚೂರು ಹೋರಾಟದ ಮೂಲ ಕರ್ತೃ ವೆಂಕಟೇಶ್ ಅಸಕಿಹಳ ರವರು ಮತ್ತು ವಾಲ್ಮೀಕಿ ನಾಯಕ ಸಮುದಾಯದ ಎಲ್ಲ ನಾಯಕರು ಉಪಸ್ಥಿತರಿದ್ದರು. ****************************

Back to top button