ಪ್ರಕೃತಿ ಬೆಳಗಾವಿ
ನಾಳೆ ಬೆಳಗಾವಿಗೆ ಡಾ. ಶಿವರಾಜಕುಮಾರ ಆಗಮನ…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕರಟಕ ದಮನಕ ಕನ್ನಡ ಸಿನಿಮಾ ಬಿಡುಗಡೆಯಾಗಿ ಅದ್ಧೂರಿಯಾಗಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗಾವಿಯ ಪ್ರಕಾಶ ಚಿತ್ರ ಮಂದಿರಕ್ಕೆ ನಟ ಡಾ. ಶಿವರಾಜಕುಮಾರ ಆಗಮಿಸಲಿದ್ದಾರೆ ಎಂದು ಬೆಳಗಾವಿ ನಿತಿನ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಾ. ಶಿವರಾಜಕುಮಾರ ಜೊತೆಗೆ ಕರಟಕ ದಮನಕ ಕನ್ನಡ ಸಿನಿಮಾ ತಂಡ ಯೋಗರಾಜ್ ಭಟ್ ಸಹ ಅಗಮಿಸಲಿದ್ದಾರೆ.
ಮಂಗಳವಾರ ಬೆಳಗ್ಗೆ ಚನ್ನಮ್ಮ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಪ್ರಕಾಶ ಚಿತ್ರಮಂದಿರಕ್ಕೆ ತೆರಳಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.
ಭೀರಾ ಅನಗೋಳ್ಕರ್, ವಿನಾಯಕ ಉಪಸ್ಥಿತರಿದ್ದರು.*******************************






