ಪ್ರಕೃತಿ ಬೆಳಗಾವಿ

*ಮಾರ್ಕೆಟ್ ಪೊಲೀಸರಿಂದ ಜೂಜಾಟದ ಅಡ್ಡೆ ಮೇಲೆ ದಾಳಿ; ಐವರು ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿಯ ವೀರಭದ್ರ ನಗರ 7ನೇ ಕ್ರಾಸ್ ಬಳಿ ಜೂಜಾಟದಲ್ಲಿ ತೊಡಗಿದ್ದ ಐವರನ್ನು ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

ನ.25ರಂದು ಪಿಎಸ್‌ಐ ಮಂಜುನಾಥ ಹುಲಕುಂದ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಅಮೀರಖಾನ್ ಕಿತ್ತೂರ, ಸಾವಿದ್ ಈರಾಪೂರ, ಸಾಹಿದ್ ಮುಲ್ಲಾ, ಮೊಹಮ್ಮದರಾಜ ಮುಲ್ಲಾ ಹಾಗೂ ಸಿಕಂದರ್ ಹುಂಡೇಕರ ಎಂಬ ಐವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿತರಿಂದ 7,300 ರು.ನಗದು ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಲಾಗಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.***************************

Leave a Reply

Your email address will not be published. Required fields are marked *

Back to top button