ಪ್ರಕೃತಿ ಬೆಳಗಾವಿ
*ಮಟಕಾ ಅಡ್ಡೆ ಮೇಲೆ ಗ್ರಾಮೀಣ ಪೊಲೀಸರ ದಾಳಿ: ಓರ್ವನ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಅಶೋಕ ಐರನ್ ಪ್ಲಾಂಟ್-2 ಸಮೀಪ ಮಟಕಾ ಜೂಜಾಟದಲ್ಲಿ ತೊಡಗಿದ್ದ ರಾಜು ದೂದಪ್ಪ ಮುಚ್ಚಂಡಿಕರ (37) ಎಂಬಾತನನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಆರೋಪಿತನಿಂದ 2,350 ರು. ನಗದು ಹಾಗೂ ಓಸಿ ಚೀಟಿಗಳನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.**************************






