ಪ್ರಕೃತಿ ಬೆಳಗಾವಿ

*ಬೆಳಗಾವಿಯಲ್ಲಿ ಗಾಂಜಾ ಮಾರಾಟ ಜಾಲದ ಮೇಲೆ ಸಿಸಿಬಿ ದಾಳಿ; ಮೂವರು ವಶಕ್ಕೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಆಟೋನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಶಿವಾನಂದ ಸುಕ್ಕನ್ನವರ (23), ನಾಗರಾಜ ಭೋವಿವಡ್ಡರ (24) ಹಾಗೂ ಲಖನ ಕಾಟಾಬಳಿ (26) ಬಂಧಿತರು.

ಆರೋಪಿಗಳಿಂದ ಸುಮಾರು 1,00,500 ರೂ. ಮೌಲ್ಯದ 2.120 ಕೆ.ಜಿ. ಗಾಂಜಾ ಹಾಗೂ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದ ರಾಜೇಶ ಚೌಹಾಣ್ ಎಂಬಾತನಿಂದ ಗಾಂಜಾ ತಂದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.***************************

Leave a Reply

Your email address will not be published. Required fields are marked *

Back to top button