ಪ್ರಕೃತಿ ಬೆಳಗಾವಿ

*ಗಡಿಭಾಗದಲ್ಲಿ ಕನ್ನಡದ ಕಂಪು ಮತ್ತಷ್ಟು ಹರಡಲಿ: ಸಿದ್ದರಾಮ ಸ್ವಾಮೀಜಿ*

*99ನೇ ನಾಡಹಬ್ಬ ಉತ್ಸವ ಉದ್ಘಾಟನೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಗಡಿಭಾಗದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಅವರು ಹೇಳಿದರು.

ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ಭಾನುವಾರ 11 ರಂದು ನಾಡಹಬ್ಬ ಉತ್ಸವ ಸಮಿತಿ ವತಿಯಿಂದ ಆಯೋಜಿಸಲಾದ 99ನೇ ನಾಡಹಬ್ಬ ಉತ್ಸವ ಮತ್ತು ಡಾ. ಸಿ.ಕೆ. ಜೋರಾಪುರವರ ಸೇವೆಯ 51 ನೇ ವರ್ಷಾಚರಣೆ ನಿಮಿತ್ತವಾಗಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ನಾಡಿನ ವ್ಯಾಪ್ತಿ ಇತ್ತು ಎಂಬ ಐತಿಹಾಸಿಕ ಉಲ್ಲೇಖವನ್ನು ಪ್ರಸ್ತಾಪಿಸಿದರು. ಜನಸಂಖ್ಯೆಯ ಆಧಾರದ ಮೇಲೆ ಭಾಷಾ ಪ್ರದೇಶಗಳ ಕುರಿತು ವಿವಾದ ಸೃಷ್ಟಿಸುವ ಬದಲು, ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಪರಸ್ಪರ ಗೌರವ ಹಾಗೂ ಸೌಹಾರ್ದ ಬೆಳೆಸಬೇಕು. ಎರಡೂ ಭಾಷೆಗಳ ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಸಾಂಸ್ಕೃತಿಕ ಸಾಮರಸ್ಯವನ್ನು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಗಡಿಭಾಗದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ನೆಲೆಗೊಳ್ಳಬೇಕು. ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಪ್ರೀತಿ, ಅಭಿಮಾನ ಹಾಗೂ ಹೆಮ್ಮೆ ಹೊಂದಿ, ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಬೇಕು.

ವಂದೇ ಮಾತರಂ ದೇಶಭಕ್ತಿಯ ಸಂಕೇತ :
ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂ ಗೀತೆ ಮಹತ್ವದ ಪಾತ್ರ ವಹಿಸಿದೆ. ದೇಶದ ಪ್ರಕೃತಿ ಸೌಂದರ್ಯವನ್ನು ವರ್ಣಿಸುವುದರ ಜತೆಗೆ ಜನರಲ್ಲಿ ದೇಶಾಭಿಮಾನ ಮೂಡಿಸುವ ಶಕ್ತಿ ಈ ಗೀತೆಗೆ ಇದೆ. ಗೀತೆಯ ಆರು ಚರಣಗಳನ್ನು ಹಾಡುವ ವಿಚಾರದಲ್ಲಿ ವಿವಾದಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ಐತಿಹಾಸಿಕ ಮಹತ್ವವನ್ನು ಅರಿತುಕೊಳ್ಳಬೇಕು. ದೇಶಭಕ್ತಿಯ ಭಾವನೆ ಮೂಡಿಸುವ ಈ ಗೀತೆಯನ್ನು ಪೂರ್ಣವಾಗಿ ಹಾಡಲು ಯಾವುದೇ ಅಡೆತಡೆಗಳು ಇರಬಾರದು ಎಂದು ಸಿದ್ದರಾಮ ಶ್ರೀಗಳು ಅಭಿಪ್ರಾಯಪಟ್ಟರು.

ವಂದೇ ಮಾತರಂ ಗೀತೆಯ ಹಿನ್ನೆಲೆ ಮತ್ತು ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದ ಜಗಜಂಪಿ ಅವರ ಕಾರ್ಯವನ್ನು ಶ್ಲಾಘಿಸಿದ ಅವರು, ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹುರುಪು ತುಂಬಿದ ಈ ಗೀತೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿರುವ ಶ್ರೇಷ್ಠ ದೇಶಭಕ್ತಿಗೀತೆಯಾಗಿದೆ ಎಂದರು.

ನಾಡಿನ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ಬೆಳೆಸಿಕೊಳ್ಳಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇರಣೆಯಾಗುತ್ತವೆ. ಮುಂಬರುವ 100ನೇ ನಾಡಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಈಗಿನಿಂದಲೇ ಯೋಜನೆ ರೂಪಿಸಿ ಸಿದ್ಧತೆಗಳನ್ನು ಆರಂಭಿಸಬೇಕು ಎಂದು ಕರೆ ನೀಡಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಅವರು ಮಾತನಾಡಿ, ಮೈಸೂರಿನಲ್ಲಿ ನಡೆಯುವ ದಸರಾ ಉತ್ಸವದ ಮಾದರಿಯಲ್ಲಿ ಬೆಳಗಾವಿಯ ನಾಡಹಬ್ಬವೂ ವೈಭವದಿಂದ ನಡೆಯಬೇಕು. ನಾಡಿನ ಧರ್ಮ, ಆಧ್ಯಾತ್ಮಿಕ ಚಿಂತನೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ವಂದೇ ಮಾತರಂ ಗೀತೆ ಅನೇಕ ಗಣ್ಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದೆ. ಇದು ಭಾರತೀಯರಲ್ಲಿ ದೇಶಭಕ್ತಿಯ ಭಾವನೆ ಮೂಡಿಸುವ ಗೀತೆಯಾಗಿದ್ದು, ಅದಕ್ಕೆ ಜಾತಿ, ಧರ್ಮ ಹಾಗೂ ಬಣ್ಣದ ದೃಷ್ಟಿಕೋನವನ್ನು ಜೋಡಿಸಬಾರದು. ನಾವೆಲ್ಲರೂ ಭಾರತೀಯರು ಎಂಬ ಏಕತೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಗಜಂಪಿ ಅವರು ನೀಡಿದ ಮಾರ್ಗದರ್ಶನದಿಂದ ನಾಡಹಬ್ಬದಲ್ಲಿ ಸಕಾರಾತ್ಮಕ ಬದಲಾವಣೆಗಳು ಮೂಡಿಬರಲಿ. ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿರುವ ಇಂತಹ ಉತ್ಸವಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಅವರು ಮಾತನಾಡಿ, ಕನ್ನಡ ನಾಡಿನ ಪರಂಪರೆ, ಸಂಸ್ಕೃತಿ ಹಾಗೂ ಕಲಾ ವೈಭವವನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ನಾಡ ಹಬ್ಬವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ.

ಬೆಳಗಾವಿಯಂತಹ ಪ್ರದೇಶದಲ್ಲಿ ಭಾಷೆ ಮತ್ತು ಕನ್ನಡ ಸಾಹಿತ್ಯವನ್ನು ಉಳಿಸಿಕೊಂಡು ಹೋಗಲು ಕಳೆದ 99 ವರ್ಷಗಳಿಂದ ಸ್ಥಳೀಯರೆಲ್ಲ ವೈಯಕ್ತಿಕ ದೇಣಿಗೆ ಸಂಗ್ರಹಿಸಿ ಈ ಉತ್ಸವ ಮಾಡುತ್ತ ಬಂದಿರುವುದು ಶ್ಲಾಘನೀಯವಾಗಿದೆ. ಐದು ದಿನಗಳ ಕಾಲ ನಡೆಯುವ ನಾಡ ಹಬ್ಬವು ಜನರಿಗೆ ರಸದೌತಣ ನೀಡುವುದರ ಜತೆಗೆ ಕನ್ನಡ ನಾಡಿನ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ವೇದಿಕೆಯಾಗಲಿ ಎಂದು ಅವರು ಆಶಿಸಿದರು.

ಈ ಸಂದರ್ಭದಲ್ಲಿ ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಡಾ.ಎಚ್‌.ಬಿ.ರಾಜಶೇಖರ, ಕಾರ್ಯದರ್ಶಿ ಡಾ‌. ಸಿ.ಕೆ. ಜೋರಾಪುರ, ಸೋಮಲಿಂಗ ಮಾವಿನಕಟ್ಟಿ, ಅನ್ನಪೂರ್ಣ ಹಿರೇಮಠ, ಜ್ಯೋತಿ ಬದಾಮಿ , ವಿಜಯಾ ಹಿರೇಮಠ, ಹಾಗೂ ಇತರರು. ಎಚ್ ಐ ತಿಮ್ಮಾಪೂರ ನಿರೂಪಿಸಿದರು‌. ಉಪಾಧ್ಯಕ್ಷರಾದ ಆರ್ ಪಿ. ಪಾಟೀಲ ವಂದಿಸಿದರು.*********************************

2 Comments

  1. Сайты для взрослых нужны в качестве безопасный инструмент посмотреть интимный развлечение без обязательных визитов и ненужного риска.
    Платформы гей-оргия худые загрузить дают приватный режим доступа к материалам и позволяют человеку самому определять удобный режим отдыха.
    С точки зрения людей 18+ это доступная возможность переключиться дома и не затрагивать чужие зоны.
    Важно, что порносайты доступны только для пользователей совершеннолетних и должны соблюдать нормы закона и осознанного решения.

  2. Бренд Rick Owens представляет собой независимый дом моды, созданный более тридцати лет назад с нонконформистской философией и особым подходом на границе готики и бунтарства.
    Основатель приобрёл известность драпировками, асимметричными пропорциями и применением плотной кожи наряду с минималистичным кроем и мрачными цветами.
    rick-owens-moscow.ru
    Бренд соединяет люкс и бунтарство, формируя гардероб для людей выбирает уникальность а также не боится выделяться нестандартно.
    В наши дни этот бренд является уже не только гардероб, но и целое мировоззрение, включающее мебель, обувь и подход продуманного бунтарства.

Back to top button