ಪ್ರಕೃತಿ ಬೆಳಗಾವಿ

*ಮಟಕಾ ಅಡ್ಡೆ ಮೇಲೆ ಶಹಾಪೂರ ಪೊಲೀಸರ ದಾಳಿ; ಇಬ್ಬರು ವಶಕ್ಕೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಮರಗಮ್ಮ ಗಲ್ಲಿ, ಖಾಸಬಾಗ ಪ್ರದೇಶದಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದ ಇಬ್ಬರನ್ನು ಶಹಾಪೂರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನ.20ರಂದು ಪಿಎಸ್‌ಐ ಹೊನ್ನಪ್ಪ ತಳವಾರ ನೇತೃತ್ವದಲ್ಲಿ ದಾಳಿ ನಡೆಸಿ ಸಂತೋಷ ಕನುಕಲಿ (53) ಹಾಗೂ ಶುಭಂ ಕನುಕಲಿ ಎಂಬುವವರನ್ನು ಬಂಧಿಸಿ, 2,380 ರು. ನಗದು ಹಾಗೂ ಓಸಿ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ. ಮಟಕಾ ಹಣವನ್ನು ಗಜಾನನ ಗರಡ ಎಂಬಾತನಿಗೆ ನೀಡುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.********************************

Leave a Reply

Your email address will not be published. Required fields are marked *

Back to top button