ಪ್ರಕೃತಿ ಬೆಳಗಾವಿ

*ಸರಕಾರದ ವಿರುದ್ಧ ಗುಡುಗಿದ ನಾರಾಯಣಗೌಡ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕರ್ನಾಟಕದ ಬೆಂಗಳೂರಿನಲ್ಲಿ ವಲಸೆ ಬಂದವರ ಹಾವಳಿ ಹೆಚ್ಚಾಗಿದೆ. ಐಟಿ, ಬಿಟಿ ಕಂಪನಿಯಲ್ಲಿ ಕನ್ನಡಿಗರ ಸಂಖ್ಯೆ ಶೂನ್ಯ. ಮೊದಲ ನಮ್ಮ ಕನ್ನಡದ ಯುವಕರಿಗೆ ಉದ್ಯೋಗ ಕೊಡಬೇಕೆಂದು ಸಮರ ಆರಂಭಿಸಿದ್ದೇನೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.

ಭಾನುವಾರ ಬೆಳಗಾವಿ ಜೀರಿಗೆ ಸಭಾಂಗಣದಲ್ಲಿ ಕರವೇ ಜಿಲ್ಲಾ ಘಟಕ ಆಯೋಜಿಸಿದ್ದ ಕನ್ನಡವೇ ಸತ್ಯ‌ ಕನ್ನಡವೇ ನಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕದಲ್ಲಿ ವಲಸೆಗರಿಗೆ ಕಡಿವಾಣ ಹಾಕದಿದ್ದರೇ ಬೆಂಗಳೂರನ್ನು ಕಳೆದುಕೊಳ್ಳುವ ಆತಂಕ ಇದೆ. ಫ್ರಾನ್ಸ್ ದೇಶ ಕಟ್ಟಲು 300 ವರ್ಷ ತೆಗೆದುಕೊಂಡಿದ್ದರು.

ಆದರೆ ವಲಸೆ ಬಂದವರು ಮೂರು ತಿಂಗಳಲ್ಲಿ ಸುಟ್ಟು ಹಾಕಿದ್ದರು. ಅಮೇರಿಕಾದ ಅಧ್ಯಕ್ಷರು ನಿಮ್ಮ ಪ್ರದೇಶ ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಆದರೆ ಈಗ ಬೆಂಗಳೂರಿನಲ್ಲಿ ವಲಸಿಗರ ಹಾವಳಿ ಹೆಚ್ಚಾಗಿರುವುದಕ್ಕೆ ಸರಕಾರ ಕಡಿವಾಣ ಹಾಕಬೇಕು ಎಂದರು.
ವಲಸೆ ಬಂದವರು ಮೊದಲು ಬೆಳಗಾವಿಯಲ್ಲಿ ಬಂದು ಮಹಾನಗರ ಪಾಲಿಕೆಯಲ್ಲಿ ಮಹಾರಾಷ್ಟ್ರದ ಪರವಾಗಿ ಠರಾವ್ ಪಾಸ್ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಅದಕ್ಕೆ ತಕ್ಕ ಉತ್ತರ ಕೊಟ್ಟಿದ್ದು ಕರವೇ ಸಂಘಟನೆ ಎಂದರು.

ವಿಶ್ವ ಕನ್ನಡ ಸಮ್ಮೇಳನಕ್ಕೂ ಮುನ್ನ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡುವ ಕಾಯ್ದೆ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಒತ್ತಾಯಿಸಿದ್ದೇನೆ. ನಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಾಗ ಕನ್ನಡ ಸಾಹಿತ್ಯ ಸಮ್ಮೇಳನ ಸಾರ್ಥಕವಾಗುತ್ತದೆ ಎಂದರು.

ಕರವೇ ದೊಡ್ಡ ಸಂಘಟನೆಯಾಗಿ ಯಾವ ರಾಜಕೀಯ ಶಕ್ತಿಗಳು ಕೆಲಸ ಮಾಡುವುದಿಲ್ಲವೋ ಅದನ್ನು ಕರವೇ ಮಾಡಿ‌ ತೋರಿಸುತ್ತದೆ. ಒಂದು ಕಾಲದಲ್ಲಿ ಬೆಳಗಾವಿಯಲ್ಲಿ ಕನ್ನಡದ ಬಾವುಟ ಹಾರಿಸುವುದು ಕಷ್ಟವಾಗಿತ್ತು. ಆದರೆ ಈಗ ಗಲ್ಲಿ ಗಲ್ಲಿಯಲ್ಲಿ ಕನ್ನಡದ ಬಾವುಟ ಹಾರಾಡುತ್ತಿದೆ ಎಂದರೆ ಕನ್ನಡಿಗರ ಸಾಹಸಕ್ಕೆ ಪ್ರೇರಣೆಯಾಗಿದೆ ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಪ್ರಭಾಕರ ಕೋರೆ ಅವರು ಬೆಳಗಾವಿಯ ನೆಲದಲ್ಲಿ ಕ್ರಾಂತಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಮಹಾಸಂತರು, ಸಾಧಕರು ಜನ್ಮ ತಾಳಿದ್ದಾರೆ. ಇಲ್ಲಿ ಬರಲು ನಾನು ಸಂಭ್ರಮಿಸುತ್ತೇನೆ. ಕನ್ನಡದ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಬರುತ್ತಿರಲಿಲ್ಲ. ಕನ್ನಡಕ್ಕೆ ಸಾಥ್ ಕೊಟ್ಟವರು ಮಠಾಧೀಶರು, ಸಾಧು ಸಂತರು. ಬೇಕಾದರೆ ಮಠ ಬಿಟ್ಟು ಬಿಡುತ್ತೇವೆ. ಆದರೆ ಕನ್ಮಡತನ ಬಿಡುವುದಿಲ್ಲ ಎಂದವರು ಮಠಾಧೀಶರು. ಎಂಇಎಸ್ ಮತ ಬ್ಯಾಂಕ್ ನಿಂದ ಭಯ ಪಡುತ್ತಿದ್ದರು. ಬೆಳಗಾವಿಯಲ್ಲಿ ಕನ್ನಡ ಕಟ್ಟಿ ಬೆಳೆಸಲು ಕರವೇಗೆ ಜೊತೆಯಾಗಿ ನಿಂತವರು ಮಠಾಧೀಶರು ಎಂದು ಸ್ಮರಿಸಿದರು.

ನಾನು ಕರವೇ ಹೋರಾಟ ಆರಂಭಿಸಿದ್ದು ನಾಲ್ಕು ದಶಕಗಳು ಕಳೆದಿವೆ. ಆದರೆ ಅತೀ ಹೆಚ್ಚು ಕಾಲ ಕಳೆದಿದ್ದು ಬೆಳಗಾವಿಯಲ್ಲಿ. ಹಿರಿಯ ತ್ಯಾಗ ಬಲಿದಾನದಿಂದ ಸಮಗ್ರ ಕರ್ನಾಟಕವಾಗಿದೆ. ಅಖಂಡವಾದ ಕರ್ನಾಟಕಕ್ಕೆ ಉದ್ಯಮ ಹಾಕಬೇಕು. ಅಂಥಲ್ಲಿ ಕನ್ನಡ ಯುವಕರಿಗೆ ಉದ್ಯೋಗ ಕೊಡಬೇಕು ಎಂದರು.
ಬೆಳಗಾವಿಗೆ ಕುತ್ತು ಬಂದಾಗ ಇಡೀ ಕರುನಾಡು ಒಂದಾಗುತ್ತದೆ.

ಬೆಳಗಾವಿ ಯಾರದೈತ್ತಿ ಎಂದರೆ ಬೆಳಗಾವಿ ನಮ್ಮದೈತಿ ಎನ್ನುವುದನ್ನು ಇಡೀ ರಾಜ್ಯ ಕೂಗಿ ಹೇಳುತ್ತದೆ ಎಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಉಪಮೇಯರ್ ಹನುಮಂತ ಕೊಂಗಾಲಿ, ಶಾಸಕ ಆಸೀಫ್ ಸೇಠ್,‌ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ, ಡಿಸಿಪಿ ನಾರಾಯಣ ಭರಮನಿ, ರಾಜಕುಮಾರ ಟೋಪಣ್ಣವರ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಸುರೇಶ‌ ಗವನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.******************************

Leave a Reply

Your email address will not be published. Required fields are marked *

Back to top button