ಪ್ರಕೃತಿ ಬೆಳಗಾವಿ
*ಬಿಮ್ಸ್ ಬಳಿ ಹೆರಾಯಿನ್ ಮಾರಾಟ; ಓರ್ವ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬಿಮ್ಸ್ ಆಸ್ಪತ್ರೆ ಬಳಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ಅಚ್ಚಲ್ ರಶೀದ ಬೇಪಾರಿ (41) ಎಂಬಾತನನ್ನು ಎಪಿಎಂಸಿ ಪೊಲೀಸರು ಬಂಧಿಸಿ, 72 ಸಾವಿರ ರು. ಮೌಲ್ಯದ 3.60 ಗ್ರಾಂ ಹೆರಾಯಿನ್ ಜಪ್ತಿ ಮಾಡಿದ್ದಾರೆ.
ನ.22ರಂದು ಪಿಎಸ್ಐ ಎಸ್.ಕೆ. ಹೊಳೆನ್ನವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.***************************






