ಪ್ರಕೃತಿ ಬೆಳಗಾವಿ

*ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಅಥಣಿಯ ವಾತ್ಸಲ್ಯ ಆಸ್ಪತ್ರೆ ವತಿಯಿಂದ ಆರ್ಥಿಕ ನೆರವು*

ಪ್ರಕೃತಿ ಬೆಳಗಾವಿ ಸುದ್ದಿ : ಅಥಣಿ : ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಒಂಬತ್ತು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಯಾದ ವಾತ್ಸಲ್ಯ ಆಸ್ಪತ್ರೆ’ ವತಿಯಿಂದ ಆರ್ಥಿಕ ಸಹಾಯಧನ ನೀಡುವ ಮೂಲಕ ಬೆಂಬಲ ಸೂಚಿಸಲಾಯಿತು.

​ಆಸ್ಪತ್ರೆಯ ವೈದ್ಯರಾದ ಡಾ. ಭೋಸಲೆ ಅವರ ಪರವಾಗಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ವ್ಯವಸ್ಥಾಪಕರಾದ ಸಚಿನ್ ಭೋಸಲೆ ಅವರು ಹೋರಾಟದ ಯಶಸ್ಸಿಗೆ ಶುಭ ಹಾರೈಸಿದರು. ಅಲ್ಲದೆ, ಬೆಂಗಳೂರಿನ ಪ್ರತಿಭಟನಾ ಸ್ಥಳದಲ್ಲಿ ಕಾರ್ಯಕರ್ತೆಯರಿಗೆ ಅಗತ್ಯವಿರುವ ಖರ್ಚು-ವೆಚ್ಚಗಳಿಗಾಗಿ ಈ ಆರ್ಥಿಕ ನೆರವನ್ನು ಹಸ್ತಾಂತರಿಸಿದರು.

​ಆಶಾ ಕಾರ್ಯಕರ್ತೆಯರ ಸಂಕಷ್ಟಕ್ಕೆ ಸ್ಪಂದಿಸಿ, ಹೋರಾಟಕ್ಕೆ ನೈತಿಕ ಹಾಗೂ ಆರ್ಥಿಕ ಬಲ ತುಂಬಿದ ಡಾಕ್ಟರ್. ರಾಹುಲ್ ಭೋಸಲೆ,ಮತ್ತು ತಜ್ಞ ವೈದ್ಯೆ ಪ್ರಣಿತಾ ಭೋಸಲೆ ಹಾಗೂ ಆಸ್ಪತ್ರೆಯ ವ್ಯವಸ್ಥಾಪಕರಾದ ಸಚಿನ್ ಭೋಸಲೆ ಹಾಗೂ ವಾತ್ಸಲ್ಯ ಆಸ್ಪತ್ರೆಯ ಸಮಸ್ತ ಸಿಬ್ಬಂದಿ ವರ್ಗದ ಸಾಮಾಜಿಕ ಕಾಳಜಿಗೆ ಬೆಳಗಾವಿ ಜಿಲ್ಲಾ ಆಶಾ ಕಾರ್ಯಕರ್ತೆಯರ ಯೂನಿಯನ್ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಅಥಣಿ ತಾಲೂಕು ಘಟಕದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹೃದಯಪೂರ್ವಕ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ವೇಳೆ ಆಶಾ ಕಾರ್ಯಕರ್ತೆಯರು ಮತ್ತು ಹೋರಾಟದ ಬೆಳಗಾವಿ ಜಿಲ್ಲೆಯ ರೂವಾರಿಗಳಾದ ಲಕ್ಷ್ಮಣ ಜಡಗನ್ನವರ ಮತ್ತು ಸಂಘಟನೆಯ ಪದಾಧಿಕಾರಿಗಳಾದ ಸುಜಾತಾ ಕಾಡಮಠ,ಅಮೃತಾ ಡಂಗಿ, ಅಶ್ವಿನಿ ಪೂಜಾರಿ,ಕವಿತಾ ಇಳಗೇರ,ನೀಲಾ ನಾವಿ,ಸುಜಾತಾ ಬಡಿಗೇರ, ಸೇರಿದಂತೆ ಹಲವರು ಬೆಂಗಳೂರಿಗೆ ತೆರಳಿದರು.*****************************

Leave a Reply

Your email address will not be published. Required fields are marked *

Back to top button