ಪ್ರಕೃತಿ ಬೆಳಗಾವಿ
*ಮಾರ್ಕೆಟ್ ಪೊಲೀಸರ ದಾಳಿ: ಹರಿತವಾದ ಚಾಕು ಸಮೇತ ಓರ್ವನ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಸೆಂಟ್ರಲ್ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಹರಿತವಾದ ಚಾಕು ಹೊಂದಿದ್ದ ಮಯೂರ ಸುಭಾಷ ರಾವುತ (32) ಎಂಬಾತನನ್ನು ಮಾರ್ಕೆಟ್ ಠಾಣೆಯ ಆ್ಯಂಟಿ ಸ್ಟಾಬಿಂಗ್ ಸ್ಟಾಡ್ ತಂಡ ಬಂಧಿಸಿದೆ.
ಪಿಎಸ್ಐ ಪಿ.ಜಿ. ಗಂಡವ್ವಗೊಳ ನೇತೃತ್ವದ ತಂಡ ಚಾಕು ವಶಪಡಿಸಿಕೊಂಡಿದ್ದು, ಆರೋಪಿತನ ವಿರುದ್ಧ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.**************************






