ಮೃಣಾಲ ಹೆಬ್ಬಾಳಕರ ರವರನ್ನು ಗೆಲ್ಲಿಸಿ. ಮಾದರಿಯ ಅಭಿವೃದ್ದಿ ಯಾಗಲು ಸಾದ್ಯ : ಮಹೇಶ ಶಿಗೀಹಳ್ಳಿ ರಾಜ್ಯಾಧ್ಯಕ್ಷರು…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : 2024 ರ ಬೆಳಗಾವಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡ ಶ್ರೀ ಮೃಣಾಲ ಹೆಬ್ಬಾಳಕರ ರವರನ್ನು ಅತಿ ಹೆಚ್ಚಿನ ಅಂತರದಿಂದ ಎಲ್ಲರೂ ಸೇರಿ ಗೆಲ್ಲಿಸುವುದು ಸೂಕ್ತ.
ಕಾರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರ ಸುಪುತ್ರಣಾಗಿ ಯಾವುದೇ ಅಹಂಕಾರ ಇಲ್ಲದೆ ಜನರ ದ್ವಣಿಯಾಗಿ ಜನರ ಕಷ್ಟಕ್ಕೆ ಸ್ಪಂದಿಸಿ ಬಡವರಿಗೆ ಸಹಾಯ ಮಾಡುವ ಗುಣ ಹೊಂದಿದ್ದು ತಾಯಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರ ರೀತಿಯಲ್ಲೇ ಅವರ ಮಾರ್ಗದರ್ಶನದಲ್ಲಿ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿಕೊಂಡು ನಿರಂತರವಾಗಿ ಸಮಾಜಸೇವೆ ಸಾಮಾಜಿಕ ಕಾರ್ಯಕ್ರಮ ಹಾಗೂ ಜನರ ಅಹವಾಲುಗಳನ್ನು ಬೆನ್ನತ್ತಿ ನ್ಯಾಯ ಕೊಡಿಸುವ ಕೆಲ್ಸ ಮಾಡಿ ಮಾದರಿಯಾಗಿದ್ದಾರೆ.
ಇಂತಹ ಸ್ಥಳಿಯ ಸಾಮಾಜಿಕ ಜವಾಬ್ದಾರಿ ಇರುವ ಯೂತ್ ಐಕಾನ್ ಗೆ ಅವಕಾಶ ನೀಡಿ 2024ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇವರನ್ನು ಅತಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಲು ಪ್ರತಿ ಒಬ್ಬರು ವಿವಿಧ ಸಂಘಟನೆಯ ಹಿರಿಯ ಮುಖಂಡರು ಯುವ ಮುಖಂಡರು ಎಲ್ಲ ಸಮುದಾಯದ ಜನತೆ ಮತ್ತು ಬೆಳಗಾವಿ ಕುಂದಾನಗರಿಯ ಜನರು ಶ್ರಮಿಸೋಣ ಮಾದರಿಯ ಅಭಿವೃದ್ದಿ ಪಡೆಯೋಣ ಎಂದು ಕ ಪ ಪಂ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ರಾಜ್ಯಾಧ್ಯಕ್ಷ ಯುವ ಹೋರಾಟಗಾರ ಮಹೇಶ ಶಿಗೀಹಳ್ಳಿ ತಿಳಿಸಿದ್ದಾರೆ.**********************************






