ರಾಮತೀರ್ಥ ನಗರದ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಚನ ಕಂಠಪಾಠ ಸ್ಪರ್ಧೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಇಲ್ಲಿನ ರಾಮತೀರ್ಥ ನಗರದ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಮಹಾನಗರ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಿಲಾಯಿತು.
ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಮಹಾನಗರ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ ಸ್ಪರ್ಧೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಸಿ.ಎಂ ಬೂದಿಹಾಳ ಅವರು, ಬಸವಾದಿ ಶರಣರ ವಚನಗಳಲ್ಲಿರುವ ಮೌಲ್ಯವನ್ನು ಹಾಗೂ ವಚನ ಕಂಠಪಾಠದಿಂದ ವ್ಯಕ್ತಿತ್ವ ವಿಕಾಸವಾಗುವ ಬಗ್ಗೆ ಶಾಲಾ ವಿಧ್ಯಾರ್ಥಿಗಳಿಗೆ ವಿವರನೆ ನೀಡಿದರು.
ವಚನ ಕಂಠಪಾಠ ಸ್ಪರ್ಧೆ ಕಾರ್ಯಕ್ರಮಕ್ಕೂ ಮುನ್ನ ಸಹ ಶಿಕ್ಷಕಿ ರಾಜಶ್ರೀ ಕಣಗಣ್ಣಿ ಪ್ರಮುಖ ಗಣ್ಯರನ್ನು ಸ್ವಾಗತಿಸಿಕೊಂಡರು. ಪ್ರಭಾರಿ ಮುಖ್ಯಾಧ್ಯಾಪಕ ಎಂ.ಎಸ್ ವಾಲಿ ಅವರು ಸ್ಪರ್ಧೆಯಲ್ಲಿ ವಿಜಯೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು, ಮಕ್ಕಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ನೈತಿಕ ಪ್ರಗತಿಗೆ ವಚನಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಈ ವೇಳೆ ಎಂ.ಆರ್ ಮೆಳವಂಕಿ, ಮಹಾಸಭಾದ ಪದಾಧಿಕಾರಿಗಳಾದ ಸುಜಾತಾ ಮತ್ತಿಕಟ್ಟಿ, ಬಸವರಾಜ ಮತ್ತಿಕಟ್ಟಿ, ಬಸವರಾಜ ಮಿಂಡೊಳ್ಳಿ, ವಿದ್ಯಾರ್ಥಿಗಳು, ತಾಲೂಕಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿಧ್ಯಾರ್ಥಿಗಳ, ಶಾಲೆಯ ಸಿಂಬಂದ್ದಿಗಳು ಸೇರಿದಂತೆ ಮತ್ತಿತರರು ಇದ್ದರು.************************************






