ಪ್ರಕೃತಿ ಬೆಳಗಾವಿ

ಶ್ರೀ ಹರಿದ್ರಾ ಗಣೇಶ ಮಂದಿರದಲ್ಲಿ ವಿನಾಯಕನ ಜಯಂತೋತ್ಸವ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಶ್ರೀ ವಿನಾಯಕ ಜಯಂತಿಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ವಿಘ್ನ ವಿನಾಶಕನಿಗೆ ಹೋಮ, ವಿಶೇಷ ಪೂಜೆ ಅಭಿಷೇಕ ಸಲ್ಲಿಸುವುದರ ಮೂಲಕ ವಿನಾಯಕನ ಜಯಂತೋತ್ಸವ ಆಚರಿಸಲಾಯಿತು.

ಬೆಳಗಾವಿಯ ಸದಾಶಿವ ನಗರದಲ್ಲಿರುವ ಶ್ರೀ ಹರಿದ್ರಾ ಗಣೇಶ ಮಂದಿರದ 22ನೇ ವರ್ಷದ ವಾರ್ಷಿಕೋತ್ಸವ ಹಾಗೂ 4 ವಿನಾಯಕ ಜಯಂತಿಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ವಿನಾಯಕನಿಗೆ, ಮಹಾಭೀಷೇಕ, ನವಗ್ರಹ ಪೂಜೆ, ಗಣಹೋಮವನ್ನು ಹಮ್ಮಿಕೊಳ್ಳಲಾಗಿದೆ.

ಈ ವೇಳೆ ವಿನಾಯಕನ ಜಯತೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ದೇವರ ದರ್ಶನ ಪಡೆದುಕೊಂಡರು. ಮಧ್ಯಾನ್ನ ಮಹಾಪುಸಾದವನ್ನು ಭಕ್ತರು ಸ್ವೀಕರಿಸಿ ಕೃತಾರ್ಥರಾದರು.

ಅದರಂತೆಯೇ ಗ್ರಾಮೀಣ ಭಾಗದ ಪಂತ ಬಾಳೇಂದ್ರಿಯಲ್ಲಿಯೂ ಅತ್ಯಂತ ಸಡಗರದಿಂದ ಗಣೇಶ ಜಯಂತಿಯನ್ನು ಆಚರಿಸಲಾಯಿತು. ಗಣೇಶ ಜಯಂತಿಯ ಹಿನ್ನೆಲೆ ಗಣಹೋಮ-ನವಗ್ರಹ ಪೂಜೆ ಇನ್ನುಳಿದ ಧಾರ್ಮಿಕ ಕಾರ್ಯಕ್ರಮಗಳು ಆಚರಿಸಲಾಯಿತು.

ಈ ವೇಳೆ ಸಾವಿರಾರು ಭಕ್ತರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ಶ್ರೀ ವಿಘ್ನವಿನಾಯಕನ ದರ್ಶನ ಪಡೆದುಕೊಂಡರು ಪುನೀತರಾದರು.*******************************

Back to top button