ಪ್ರಕೃತಿ ಬೆಳಗಾವಿ

*ಮಟಕಾ ಅಡ್ಡೆಯ ಮೇಲೆ ಪೊಲೀಸ್ ದಾಳಿ: ಇಬ್ಬರ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಮುಚ್ಚಂಡಿ ಗ್ರಾಮದಲ್ಲಿ ಮಟಕಾ ಜೂಜಾಟದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪಿಐ ಮಂಜುನಾಥ ನಾಯಿಕ ನೇತೃತ್ವದ ತಂಡ ದಾಳಿ ನಡೆಸಿ ಪ್ರಕಾಶ ಹುಲಿಕೋತಲೆ (31) ಹಾಗೂ ರೋಹಿತ ಮುರಾರಿ (21) ಎಂಬುವರನ್ನು ವಶಕ್ಕೆ ಪಡೆದಿದೆ.

ಆರೋಪಿಗಳಿಂದ 28,840 ರು. ನಗದು, 4 ಸಾವಿರ ರು. ಮೌಲ್ಯದ ಎರಡು ಮೊಬೈಲ್‌ಗಳು, ಮಟಕಾ ಚೀಟಿಗಳು ಹಾಗೂ ಪೆನ್ನು ಸೇರಿದಂತೆ ಒಟ್ಟು 32,840 ರು.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸಂಗ್ರಹಿಸಿದ ಹಣವನ್ನು ಮಹೇಶ ಯಲ್ಲಪ್ಪ ಯಲ್ಲಾರಿ ಎಂಬಾತನಿಗೆ ನೀಡುತ್ತಿದ್ದುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.*******************************

Leave a Reply

Your email address will not be published. Required fields are marked *

Back to top button