ಪ್ರಕೃತಿ ಬೆಳಗಾವಿ
*ಕೊಯ್ತಾ ಇಟ್ಟುಕೊಂಡಿದ್ದ ಆರೋಪಿ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ತಾನಾಜಿ ಗಲ್ಲಿಯಲ್ಲಿ ಅಕ್ರಮವಾಗಿ ಹರಿತವಾದ ಕಬ್ಬಿಣದ ಕೊಯ್ತಾ ಇಟ್ಟುಕೊಂಡಿದ್ದ ಅಭಿಷೇಕ ಕೆಂಕರೆ (43) ಎಂಬಾತನನ್ನು ಆ್ಯಂಟಿ ಸ್ಟಾಬಿಂಗ್ ತಂಡದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾರ್ಕೆಟ್ ಠಾಣೆಯ ಪಿಎಸ್ಐ ಪಿ.ಜಿ. ಗಂಡವ್ವಗೋಳ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.***********************






