ಪ್ರಕೃತಿ ಬೆಳಗಾವಿ

*ಮೂರು ಕೋಟಿ ನಗದು ವಂಚನೆಗೆ ಯತ್ನ: ನಾಲ್ವರ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : 5 ಕೋಟಿ ಆನ್‌ಲೈನ್ ವರ್ಗಾವಣೆ ಮಾಡಿ 3 ಕೋಟಿ ನಗದು ಪಡೆಯುವ ವ್ಯವಹಾರದ ಹೆಸರಿನಲ್ಲಿ ಪರಸ್ಪರ ವಂಚನೆಗೆ ಯತ್ನಿಸುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನ.7ರಂದು ಶಾಂತಿನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಶಿವಲಿಂಗಯ್ಯ ಗಣಾಚಾರಿ, ಸಾಗರ ಕಿಳ್ಳಿಕೇತ, ವಿನಾಯಕ ನೋಕರೆ ಹಾಗೂ ಶಿವಾನಂದ ಮುನವಳ್ಳಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಮಕ್ಕಳ ಆಟಿಕೆಯ ನೋಟುಗಳನ್ನು ಅಸಲಿ ಹಣವೆಂದು ತೋರಿಸಿ ವಂಚನೆಗೆ ಯತ್ನಿಸುತ್ತಿದ್ದರು ಎನ್ನಲಾಗಿದೆ. ದಾಳಿ ವೇಳೆ ಏರ್ ಪಿಸ್ತೂಲ್, ಐದು ಮೊಬೈಲ್‌ಗಳು ಹಾಗೂ ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.*********************************

Leave a Reply

Your email address will not be published. Required fields are marked *

Back to top button