ಪ್ರಕೃತಿ ಬೆಳಗಾವಿ
*ಅಕ್ರಮ ಮದ್ಯ ಮಾರಾಟ: 44 ಸಾವಿರ ಮೌಲ್ಯದ ಸರಾಯಿ ಜಪ್ತಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಗ್ಯಾಂಗವಾಡಿ ಶೇಖ್ ಕಾಲೇಜಿನ ಹುಡುಗರ ಹಾಸ್ಟೆಲ್ ಸಮೀಪ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ರಾಂದವ ದತ್ತಾ ಸಕಟ ಎಂಬಾತನ ಮೇಲೆ ಮಾಳಮಾರುತಿ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಆರೋಪಿ ಪರಾರಿಯಾಗಿದ್ದು, 44,175 ಮೌಲ್ಯದ ರಮ್, ವಿಸ್ಕಿ ಹಾಗೂ ಬಿಯರ್ ಪೌಚ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.***************************






