ಲಿಂಗಾಯತ ಮಹಿಳಾ ಸಮಾಜದಿಂದ ” ಉತ್ಸವ” ಕಾರ್ಯಕ್ರಮ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ರಾಜ್ಯದಲ್ಲಿ ಕನ್ನಡ ಭಾಷೆ ತನ್ನದೇ ಆದ ಗೌರವ, ಮೌಲ್ಯ ಹೊಂದಿದೆ. ಇಂತಹ ಕನ್ನಡವನ್ನು ಉಳಿಸಿ, ಬೆಳೆಸುವುದು ಪ್ರತಿ ಕನ್ನಡಿಗರ ಕರ್ತವ್ಯವಾಗಿದೆ. ಕನ್ನಡ ಪ್ರೇಮ ನಿರಂತರವಾಗಿ ಇರಬೇಕು ಎಂದು
ಕಿರುತೆರೆ ಮತ್ತು ಚಲನಚಿತ್ರ ಅಭಿನೇತ್ರಿ ಸುಧಾ ಬೆಳವಾಡಿ ಅವರು ಹೇಳಿದರು.
ನಗರದ ನೆಹರುನಗರ ಕನ್ನಡ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜ (ರಿ) ಬೆಳಗಾವಿ ಹಾಗೂ ಕನ್ನಡ ಭವನ ಸಹಯೋಗದೊಂದಿಗೆ ಶನಿವಾರ 22 ರಂದು ಆಯೋಜಿಸಲಾದ ” ಉತ್ಸವ” ರಾಜ್ಯೋತ್ಸವ, ವಚನೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಸಮ್ಮೇಳನಗಳು, ರಾಜ್ಯೋತ್ಸವ ಜನರ ನಡುವೆ ಪ್ರೀತಿ, ಬಾಂಧವ್ಯ, ಸಾಮರಸ್ಯ ಬೆರೆಸುವಂತಹ ಸಂಪರ್ಕ ಕೊಂಡಿಯಾಗಿದೆ. ಕನ್ನಡದ ಜಾತ್ರೆಯು ನಿರಂತರವಾಗಿ ನಡೆಯಲಿ. ಬೆಳಗಾವಿಯಲ್ಲಿ ಅಖಿಲ ಕನ್ನಡದ ಸಾಹಿತ್ಯ ಸಮ್ಮೇಳನ ಸೇರಿದಂತೆ ನೂರಾರು ಕನ್ನಡ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗೆ ಕನ್ನಡದ ಕಂಪು
ವಿಶ್ವಾದ್ಯಂತ ಪಸರಿಸುವ ಕೆಲಸವಾಗಬೇಕು ಎಂದರು
ಹಾಗೇಯೇ ಈ ಗಡಿಯಲ್ಲಿ ರಾಜ್ಯೋತ್ಸವದ ಬಗ್ಗೆ ಕೇಳಿದೇ. ಈಗಾಗಲೇ ಇಲ್ಲಿನ ರಾಜ್ಯೋತ್ಸವ ಮೆರವಣಿಗೆ ಇತಿಹಾಸ ಕೂಡ ಬರೆದಿದೆ. ಇಂದು ಸಿಹಿನಾಡು ಬೆಳಗಾವಿಗೆ ಆಗಮಿಸಿರುವುದು ನನ್ನ ಸೌಭಾಗ್ಯ. ರಾಜ್ಯೋತ್ಸವ ಜೊತೆಗೆ ಇಲ್ಲಿನ ಕನ್ನಡ ಪ್ರೇಮ ವಿಶ್ವದ್ಯಾಂತ ಪಸರಿಸಬೇಕು. ಕರ್ನಾಟಕ ರಾಜ್ಯೋತ್ಸವ ಕುರಿತು ಹೆಚ್ಚಿನ ಬೆಳಗಾವಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದರು.
ಕನ್ನಡ ಬಾಷೆ ಕುಟುಂಬದವರಿಗೆ ದಾರಿದೀಪವಾಗಿದೆ.
ನಾನು ನಟಿಸಿದ ಕಿರುತೆರೆ ಮತ್ತು ಚಲನಚಿತ್ರವೂ ಯಶಸ್ವಿಯಾಗಿರುವುದು ಹೆಮ್ಮೆಯ ಇದೆ. ಕನ್ನಡ ಭಾಷೆ ಎಲ್ಲರನ್ನು ಅಪ್ಪಿಕೊಂಡು ಬದುಕು ಕಲಿಸಿ ಕೊಡುವ ಇತಿಹಾಸ ಭಾಷೆ. ಕನ್ನಡಕ್ಕೆ ಕೈಲಾದಷ್ಟು ಸೇವೆ ಮಾಡುವ ಮೂಲಕ ಇನ್ನಷ್ಟು ಗಟ್ಟಿಗೊಳಿಸುವುದರೊಂದಿಗೆ ಬೆಳೆಸೋಣ ಎಂದರು.
ಈ ಸಂದರ್ಭದಲ್ಲಿ ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಶೈಲಜಾ ಬಿಂಗೆ, ಕ.ಸಾ.ಪ ಅಧ್ಯಕ್ಷೆ ಮಂಗಲ ಮೆಟಗುಡ್ಡ, ಚಿಕ್ಕೋಡಿ ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ ಲಿಂಗಾಯತ ಮಹಿಳಾ ಸಮಾಜ ಅಧ್ಯಕ್ಷೆ ಮಧುಮತಿ ಹಿರೇಮಠ, ಕಾರ್ಯದರ್ಶಿ ರಕ್ಷಾ ದೇಗಿನಾಳ, ಸಹ ಕಾರ್ಯದರ್ಶಿ ಸರೋಜಾ ನಿಶಾನದಾ, ಲಿಂಗಾಯತ ಮಹಿಳಾ ಸಮಾಜ ಸಂಘದ ಸದಸ್ಯರು ಹಾಗೂ ಇತರರು ಇದ್ದರು.**************************************






