ಪ್ರಕೃತಿ ಬೆಳಗಾವಿ

*ರಾಮಾಪುರದಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗೆ ಚನ್ನರಾಜ ಚಾಲನೆ*

ಪ್ರಕೃತಿ ಬೆಳಗಾವಿ ಸುದ್ದಿ : ಖಾನಾಪುರ : ತಾಲ್ಲೂಕಿನ ಭೂರಣಕಿ ಗ್ರಾಪಂ ವ್ಯಾಪ್ತಿಯ ರಾಮಾಪುರ ಗ್ರಾಮದಲ್ಲಿ ಭಾನುವಾರ ನವರಾತ್ರಿ ಅಂಗವಾಗಿ ಗ್ರಾಮಸ್ಥರು ಆಯೋಜಿಸಿದ್ದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, “ಚಿನ್ನಿ ದಾಂಡು, ಲಗೋರಿ,ಖೋಖೋ, ಕುಸ್ತಿ, ಕಬಡ್ಡಿ, ಪಂದ್ಯಾವಳಿಗಳು ಇಂದಿನ ಯುಗದಲ್ಲಿ ನಶಿಸಿ ಹೋಗುವ ಸ್ಥಿತಿಗೆ ತಲುಪಿವೆ. ಗ್ರಾಮೀಣ ಪ್ರದೇಶದ ಯುವಕರು ಗ್ರಾಮೀಣ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದರು.

ಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ರಿಯಾಜ ಅಹ್ಮದ ಪಟೇಲ ಅಧ್ಯಕ್ಷತೆ ವಹಿಸಿದ್ದರು. ಸುರಪುರ ಕೇರವಾಡ ಅಡವಿಸಿದ್ದೇಶ್ವರ ಮಠದ ಅಡವಿಸಿದ್ಧೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಇಮಾಮಸಾಬ ಕಿತ್ತೂರ, ಆರಿಫ್ ಪಾಟೀಲ, ಫೈರೋಜ್ ದೇವಡಿ, ನಾಸೀರ ಹುಸೇನ ಪಟೇಲ, ಗೌಸಲಾಲ ಪಟೇಲ, ಮಹೇಶ ಪಾಟೀಲ, ಎಂ.ಎಂ ಸಾಹುಕಾರ, ಅದೃಶ್ಯ ಹಂಚಿನಮನಿ, ದಯಾನಂದ ಗುಪಿತ, ಕಿಶೋರ ಮಿಠಾರಿ ಮತ್ತು ಇತರರು ಇದ್ದರು.

ಖಾನಾಪುರ ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಹೊನಲು ಬೆಳಕು ಕಬ್ಬಡ್ಡಿ ಪಂದ್ಯಾವಳಿಯನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.*******************************

Leave a Reply

Your email address will not be published. Required fields are marked *

Back to top button