ಪ್ರಕೃತಿ ಬೆಳಗಾವಿ

*ಮನೆಗಳ್ಳತನ ಮಾಡುತ್ತಿದ್ದ ಖಿಲಾಡಿ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಪೀರನವಾಡಿ, ಹುಂಚ್ಯಾನಟ್ಟಿ ಹಾಗೂ ಮಜ್ಜೆ ಗ್ರಾಮಗಳ ವ್ಯಾಪ್ತಿಯಲ್ಲಿ ಆರು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪದ ಮೇಲೆ ರೋಹನ ರೂಪೇಶ ಪಾಟೀಲ (30) ಎಂಬ ಆರೋಪಿಯನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ 23.88 ಲಕ್ಷ ರು. ಮೌಲ್ಯದ 161 ಗ್ರಾಂ ಚಿನ್ನಾಭರಣ, 2.30 ಲಕ್ಷ ರು. ಮೌಲ್ಯದ ಒಂದು ಕೆ.ಜಿ. ಬೆಳ್ಳಿ ವಸ್ತುಗಳು, 35 ಸಾವಿರ ರು. ಮೌಲ್ಯದ ಸ್ಕೂಟಿ ಹಾಗೂ ಕಳ್ಳತನಕ್ಕೆ ಬಳಸಿದ ಉಪಕರಣಗಳು ಸೇರಿ ಒಟ್ಟು 26,53,400 ರು.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯನ್ನು ಇನ್‌ಸ್ಪೆಕ್ಟರ್ ನಾಗನಗೌಡ ಕಟ್ಟಿಮನಿಗೌಡ ನೇತೃತ್ವದ ತಂಡ ನಡೆಸಿದ್ದು, ಪೊಲೀಸರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.*********************************

Leave a Reply

Your email address will not be published. Required fields are marked *

Back to top button