ಪ್ರಕೃತಿ ಬೆಳಗಾವಿ

*ಮಟಕಾ ಅಡ್ಡೆಯ ಮೇಲೆ ದಾಳಿ: ಆರೋಪಿ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಸಾಗರ ಕಾಲನಿ, ಸಿದ್ದೇಶ್ವರ ಗುಡ್ಡದ ಬಳಿ ಮಟಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಮಾಳಮಾರುತಿ ಠಾಣೆ ಪೊಲೀಸರು ಅಫ್ತಾಬ್ ಅಕ್ಷರ ಶಾನವಾಲೆ (22) ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿಯಿಂದ 5,330 ರು.ನಗದು, 15,000 ರು.ಮೌಲ್ಯದ ಮೊಬೈಲ್ ಹಾಗೂ ಓಸಿ ಚೀಟಿಗಳು ಸೇರಿ ಒಟ್ಟು 20,330 ರು.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಟಕಾದಿಂದ ಸಂಗ್ರಹಿಸಿದ ಹಣವನ್ನು ಜಿಯಾ ಭಾಯ್ ಎಂಬಾತನಿಗೆ ನೀಡುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.

ಈ ಕುರಿತು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದಾಳಿ ನಡೆಸಿದ ಪಿಎಸ್‌ಐ ಶ್ರೀಶೈಲ್ ಹುಲಗೇರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.********************************

Leave a Reply

Your email address will not be published. Required fields are marked *

Back to top button