*ಬೆಳಗಾವಿ ಕಾಳೆನಟ್ಟಿ ಗ್ರಾಮದಲ್ಲಿ ಸ್ಮಶಾನ ಭೂಮಿಗಾಗಿ ಜನರ ಪರದಾಟ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ತಾಲೂಕಿನ ಕಾಳೆನಟ್ಟಿ ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದಾಗ ಅಂತ್ಯಕ್ರಿಯೆ ಮಾಡಲು ಸ್ಮಶಾನ ಭೂಮಿ ಇಲ್ಲದೆ ಹಲವು ಅವಾಂತರಗಳು ಆಗುತ್ತಿದ್ದು. ಈ ವಿಚಾರವಾಗಿ ಕೆಲವು ದಿನಗಳ ಹಿಂದೆ ಗ್ರಾಮದ ಜನ ಈ ಸಮಸ್ಯೆಗಳನ್ನು ಒಳಗೊಂಡು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ರಾಜ್ಯಾದ್ಯಕ್ಷರಾದ ಮಹೇಶ್ ಎಸ್ ಶೀಗಿಹಳ್ಳಿ ರವರ ಜೊತೆ ಚರ್ಚೆ ಮಾಡಿದ್ದರು.
ಅದೆ ಕೆಲವು ದಿನಗಳ ನಂತರ ಬೆಳಗಾವಿಗೆ SC/ST ಬುಡಕಟ್ಟು ಸಮುದಾಯಗಳ ಆಯೋಗದ ಅದ್ಯಕ್ಷರು ಡಾ।। ಎಲ್ ಮೂರ್ತಿ ರವರು ಬೆಳಗಾವಿಗೆ ಬಂದು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಮಸ್ಯೆ ಕುರಿತು ಸಭೆಯಲ್ಲಿ ಸಾಮಾಜಿಕ ಹೋರಾಟಗಾರರು ಮಹೇಶ್ ಎಸ್ ಶೀಗಿಹಳ್ಳಿ ರವರು ಸಮಸ್ಯೆಗಳ ಕುರಿತು ಮಾತನಾಡಿ ಸಭೆಯಲ್ಲಿ ಗುಡುಗಿದರು ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಮುಖಂಡರ ಸಮ್ಮುಖದಲ್ಲಿ ಆಯೋಗದ ಅಧ್ಯಕ್ಷರಿಗೆ ಮತ್ತೆ ಸಮಸ್ಯೆ ಬಗ್ಗೆ ವಿವರಿಸಿದರು. ಮತ್ತು ಇದೆ ತರಹ ಬೆಳಗಾವಿ ಜಿಲ್ಲೆಯಲ್ಲಿ ಶೇಖಡಾ70% ಸಮಸ್ಯೆಗಳು ಇದ್ದಾವೆ ಎಂದು ತಿಳಿಸಿದರು. ಅನ್ಯಾಯಕ್ಕೆ ಒಳಗಾದ ಸೌಲಭ್ಯ ವಂಚಿತ ಇಂತಹ ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಿಸುವಂತೆ ತಿಳಿಸಲಾಗಿತ್ತು.
ಸಭೆ ನಡೆದ ಕೆಲವು ದಿನಗಳ ಅಷ್ಟರಲ್ಲಿ ಕಾಳೆನಟ್ಟಿ ಗ್ರಾಮದಲ್ಲಿ ಒಬ್ಬ ಯುವಕ ಸಾವನ್ನಪಿದ್ದು ಅಂತ್ಯಕ್ರಿಯೆ ಮಾಡಲು ಸ್ಥಳವಿಲ್ಲದೆ ಗ್ರಾಮದ ಜನ ಸಮಸ್ಯೆಗೆ ಒಳಗಾಗಿದ್ದರು. ಗ್ರಾಮದ ಜನರ ಕರೆಗೆ ಒಗ್ಗಟ್ಟು ಸ್ಥಳಕ್ಕೆ ಬೇಟಿ ಮಾಡಿ ಗ್ರಾಮದ ಒಂದರ ಜಮೀನಿನ ಮಾಲೀಕರಾದ ಹಿರಿಯರಿಗೆ ಬೇಟಿ ಮಾಡಿ ಮಾತನಾಡಿ ತಿಳಿಹೇಳಿ ದಯವಿಟ್ಟು ಸ್ಮಶಾನ ಭೂಮಿಗಾಗಿ ಸ್ಥಳಾವಕಾಶ ಮಾಡಿಕೊಡಿ ಮತ್ತು ಸರ್ಕಾರದಿಂದ ನಿಮ್ಮ ಜಮೀನಿಗೆ ಒಂದು ಬೆಲೆ ನಿಗದಿ ಮಾಡಿ ಜಮೀನು ಪಡೆದು ಸ್ಮಶಾನ ಭೂಮಿ ಮಾಡಿಕೊಳ್ಕುತ್ತೇವೆ.
ಎಂದು ಹಿರಿಯರಿಗೆ ಸಾಮಾಜಿಕ ಹಾಗೂ ಕನ್ನಡಪರ ಹೋರಾಟಗಾರ ಮಹೇಶ್ ಎಸ್ ಶೀಗಿಹಳ್ಳಿ ರವರು ತಿಳಿಸಿದರು ಜೊತೆಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾತನಾಡಿ ಸ್ಮಶಾನ ಭೂಮಿ ಮಂಜೂರು ಮಾಡಲು ತಾವುಗಳು ಕ್ರಮ ಜರುಗಿಸಬೇಕು ಹಾಗೂ ಸ್ಥಳಕ್ಕೆ ಬೇಟಿ ಮಾಡಬೇಕು ಮತ್ತು ಜಮೀನು ನೀಡಿದ ಮಾಲೀಕರ ಜಮೀನಿಗೆ ಸರ್ಕಾರದಿಂದ ಒಂದು ಬೆಲೆ ನಿಗದಿ ಮಾಡಿ ಅನುಕೂಲಮಾಡಿಕೊಡಬೇಕು ಎಂದು ತಿಳಿಸಿ ಮತ್ತು ಜಮೀನು ಮಾಲೀಕರಿಗೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಫೋನ್ ಕರೆ ಮುಖಾಂತರ ಮಾತನಾಡಿಸಿ ಎಲ್ಲರನ್ನೂ ಒಪ್ಪಿಸಿ ತಕ್ಕ ಮಟ್ಟಿಗೆ ಸಮಸ್ಯೆ ಬಗೆಹರಿಸಿ ಮೃತ ಹೊಂದಿದ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲು ಮಹೇಶ್ ಎಸ್ ಶೀಗಿಹಳ್ಳಿ ರವರು ಸ್ಥಳಾವಕಾಶ ಮಾಡಿಕೊಟ್ಟಿದ್ದು.
ಇನ್ನು ಮುಂದೆ ಈ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಮುಂದಿನ ಚಟುವಟಿಕೆ ಹಾಗೂ ಕೈಮೀರಿ ಪ್ರಯತ್ನ ಮಾಡಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಈ ವಿಚಾರವಾಗಿ ನ್ಯಾಯ ಸಿಗೋವರೆಗೂ ಪ್ರಯತ್ನ ಮಾಡುತ್ತೇವೆ ಹೋರಾಟದ ಅಗತ್ಯ ಬಿದ್ದರೆ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ ಎಂಬ ಮಾತನ್ನು ಗ್ರಾಮದ ಜನರಿಗೆ ಹಾಗೂ ಅಧಿಕಾರಿಗಳಿಗೆ ಮಹೇಶ್ ಎಸ್ ಶೀಗಿಹಳ್ಳಿ ರವರು ತಿಳಿಸಿದರು.**********************************






