ಪ್ರಕೃತಿ ಬೆಳಗಾವಿ

*ಕಿತ್ತೂರು ಕರ್ನಾಟ ಸೇನೆ ಸಂಘಟನೆಯಿಂದ ಪ್ರಾದೇಶಿಕ ಆಯುಕ್ತರು ಬೆಳಗಾವಿ ರವರಿಗೆ ಮನವಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ನಿರಾಕರಿಸುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯ ಕನ್ನಡ ನಾಡು ನುಡಿ ಗಡಿ ಹಿತಾಸಕ್ತಿ ವಿರೋಧಿ ನಿಲುವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರಕಾರಕ್ಕೆ ವರದಿ ಕಳಿಸುವ ಕುರಿತು ಮಾನ್ಯ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ  ಗಡಿವಿವಾದಕ್ಕೆ ಮಹಾಜನ ಆಯೋಗದ ವರದಿಯೆ ಅಂತಿಮ ಎಂಬ ಗೊತ್ತುವಳಿ ಅಂಗೀಕರಿಸಬೇಕೆಂದು ಆಗ್ರಹಿಸಿ ಬೆಳಗಾವಿಯ 20 ಕ್ಕೂ ಆದಿಕ ಕನ್ನಡ ಸಂಘಟನೆಗಳು ಕಳೆದ ಮಾರ್ಚ 26 ರಿಂದ ಹೋರಾಟ ನಡೆಸಿವೆ 2005 ರ ಅಕ್ಟೋಬರ್ 27 ರಂದು ಬೆಳಗಾವಿ ಪಾಲಿಕೆಯಲ್ಲಿ ಮಹಾರಾಷ್ಟ್ರ ಪರವಾಗಿ ಗೊತ್ತುವಳಿ ಸ್ವೀಕರಿಸಲಾಗಿದೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಮೂಲಕ ಗಡಿವಿವಾದ ಬಗೆಹರಿಸಬೇಕೆಂಬ ಒತ್ತಾಯಿಸುವ ಗೊತ್ತುವಳಿಯನ್ನು ಅಂಗೀಕರಿಸಲಾಗಿದೆ.

2004 ರಿಂದ ಸುಪ್ರೀಂ ಕೋರ್ಟಿನಲ್ಲಿ ಸ್ವೀಕಾರವಾಗದೇ ಹೊಸ್ತಿಲಲ್ಲಿರುವ ಗಡಿವಿವಾದ ಪ್ರಕರಣದಲ್ಲಿ ಮಹಾರಾಷ್ಟ್ರ ಸರಕಾರವು ಬೆಳಗಾವಿ ಪಾಲಿಕೆಯ ಗೊತ್ತುವಳಿಯನ್ನು ಪೂರಕ ದಾಕಲೆಯನ್ನಾಗಿ ಬಳಸುತ್ತಿದೆ ಈ ಹಿನ್ನೆಲೆಯಲ್ಲಿ ಈಗ ಕರ್ನಾಟಕ ಪರವಾದ ಗೊತ್ತುವಳಿ ಸ್ವೀಕರಿಸಬೇಕೆಂಬ ಕನ್ನಡ ಸಂಘಟನೆಗಳು ಹೋರಾಟ ನಡೆಸಿವೆ.

ಎರಡು ತಿಂಗಳಿನಿಂದ ಹೋರಾಟ ನಡೆಸಿದ್ರೂ ಸಹ ಪಾಲಿಕೆಯಲ್ಲಿ 35 ಸದಸ್ಯರ ಬಹುಮತ ಹೊಂದಿರುವ ಬಿಜೆಪಿ ನಾಯಕರು ಗೊತ್ತುವಳಿ ಸ್ವೀಕರಿಸಿಲ್ಲ . ಇದು ಕನ್ನಡ ನಾಡು ನುಡಿಗೆ ಬಗೆದ ಅನ್ಯಾಯವಾಗಿದೆ ಇದನ್ನು ತಾವು ಗಂಭೀರವಾಗಿ ಪರಿಗಣಿಸಬೇಕು ಪಾಲಿಕೆಯ ಈ ನಡುವಳಿಕೆಯ ಬಗ್ಗೆ ತಾವು ರಾಜ್ಯ ಸರಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಲಾಗಿದ್ದು.

ಕಿತ್ತೂರು ಕರ್ನಾಟಕ ಸೇನೆ ಪದಾದಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯಾದ್ಯಕ್ಷರು
ಮಹಾದೇವ ತಳವಾರ
ಕಿತ್ತೂರು ಕರ್ನಾಟಕ ಸೇನೆ

ರಾಜ್ಯಾದ್ಯಕ್ಷರು
ಯುವ ಘಟಕ /ಕಿತ್ತೂರು ಕರ್ನಾಟಕ ಸೇನೆ.

(ರಾಜ್ಯ ಪ್ರಧಾನ ಸಂಚಾಲಕರು
ದೇವೇಂದ್ರ ತಳವಾರ
ಕಿತ್ತೂರು ಕರ್ನಾಟಕ ಸೇನೆ . )

(ಶಿವಾನಂದ ಕೋಲ್ಕಾರ
ಜಿಲ್ಲಾಧ್ಯಕ್ಷರು .ಬೆಳಗಾವಿ )

ರತ್ನಾ ಗೋಧಿ
ರಾಜ್ಯ ಉಪಾದ್ಯಕ್ಷರು .ಮಹಿಳಾ ಘಟಕ

ರಮೇಶ್ ರಾಮಗನಟ್ಟಿ
ರಾಜ್ಯ ಸಂಘಟನಾ ಕಾರ್ಯದರ್ಶಿ

ರವಿ ಪಾಟೀಲ
ರಾಜ್ಯ ಉಪಾದ್ಯಕ್ಷರು

ಹಾಗೂ ಕಿತ್ತೂರು ಕರ್ನಾಟಕ ಸೇನೆ ಎಲ್ಲಾ ಪದಾದಿಕಾರಿಗಳು ಉಪಸ್ಥಿತರಿದ್ದರು.********************************

Leave a Reply

Your email address will not be published. Required fields are marked *

Back to top button