ಪ್ರಕೃತಿ ಬೆಳಗಾವಿ

*ಹೆತ್ತ ತಾಯಿಯನ್ನೇ ಅನಾಥೆಯಂತೆ ಕಾಡಿಗೆ ಬಿಟ್ಟ ಕ್ರೂರಿ ಮಗ! ಬೆಳಗಾವಿಯಲ್ಲಿ ಬೆಚ್ಚಿಬೀಳಿಸುವ ಘಟನೆ*

ಪ್ರಕೃತಿ ಬೆಳಗಾವಿ ಸುದ್ದಿ : ಹೆತ್ತ ತಾಯಿಗಿಂತ ದೊಡ್ಡ ದೇವರಿಲ್ಲ’ ಎಂಬುದು ನಮ್ಮ ಸಂಸ್ಕೃತಿಯ ಪ್ರಮುಖ ತತ್ವ. ಆದರೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ನಡೆದ ಈ ಘಟನೆ ಮಾನವೀಯತೆಯೇ ಸತ್ತಿದೆಯೇ ಎಂಬ ಸಂಶಯವನ್ನು ಉಂಟುಮಾಡುತ್ತದೆ. ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ತಾಯಿ ಕಮಲಮ್ಮ ಕಟ್ಟಿ ಅವರನ್ನು, ಅವರ ಸ್ವಂತ ಮಗ ಸಂತೋಷ ಕಟ್ಟಿ ರಾತ್ರಿ 10 ಗಂಟೆಯ ಕತ್ತಲಲ್ಲಿ ಮುನವಳ್ಳಿ ಜಲಾಶಯದ ಸಮೀಪವಿರುವ ನಿರ್ಜನ ಗುಡ್ಡಗಾಡು ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.

​ಮಗನೇ ಅನಾಥೆಯಂತೆ ಬಿಟ್ಟು ಹೋದಾಗ, ಮರುದಿನ ಮುಂಜಾನೆ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದ ವೃದ್ಧೆ ಅಳುತ್ತಾ ದಾರಿಹೋಕರ ಮುಂದೆ ತನ್ನ ಅಳಲು ತೋಡಿಕೊಂಡಿದ್ದಾರೆ. ಈ ಹೃದಯವಿದ್ರಾವಕ ದೃಶ್ಯ ಅಲ್ಲಿನ ಸ್ಥಳೀಯರ ಕರುಳನ್ನು ಹಿಂಡಿದೆ.

​ವಿಶೇಷವೆಂದರೆ, ತಾಯಿಯನ್ನು ಈ ರೀತಿ ಬಿಟ್ಟು ಹೋದ ಸಂತೋಷ ಕಟ್ಟಿ ಬೇರೆಲ್ಲೂ ಅಲ್ಲ, ನಮ್ಮ ಕೆಎಸ್‌ಆರ್‌ಟಿಸಿಯ ಸಂಕೇಶ್ವರ ಡಿಪೋದಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೇ ಹೆತ್ತ ತಾಯಿಗೆ ಈ ರೀತಿ ಮಾಡಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಸ್ತುತ ಸ್ಥಳೀಯರೇ ಮಾನವೀಯತೆಯಿಂದ ಮುಂದೆ ಬಂದು, ವೃದ್ಧೆಗೆ ನೀರು, ಆಹಾರ ನೀಡಿ ಆರೈಕೆ ಮಾಡಿದ್ದಾರೆ. ವಯಸ್ಸಾದ ತಾಯಿಯನ್ನು ಸಾಕೋದು ಬೇಡವೆಂದು ಕಾಡಿಗೆ ತಳ್ಳಿದ ಈ ಕ್ರೂರಿ ಮಗನ ವಿರುದ್ಧ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಅಸಹಾಯಕ ವೃದ್ಧೆಗೆ ಸರ್ಕಾರದಿಂದ ಸೂಕ್ತ ಆಶ್ರಯ ಹಾಗೂ ನೆರವು ಕೊಡಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ಈ ಘಟನೆ ಮಾನವ ಕುಲವೇ ತಲೆ ತಗ್ಗಿಸುವಂತದ್ದು.*******************************

Back to top button