*ಮಹಿಳೆಯರ 2 ಸಾವಿರ ಕೂಡಿಸಿ ನೀರಾವರಿ ಮಾಡೋಣ ಶಾಸಕ ನಿಖಿಲ್ ಕತ್ತಿ ಹೇಳಿಕೆಗೆ ಭಾರೀ ಆಕ್ರೋಶ*

ಪ್ರಕೃತಿ ಬೆಳಗಾವಿ ಸುದ್ದಿ : ಹುಕ್ಕೇರಿ : ಎಲ್ಲ ಮಹಿಳೆಯರ ಹತ್ತಿರ ಇರುವ 2 ಸಾವಿರವನ್ನು ಕೂಡಿಸಿ, ಜೊತೆಗೆ ನನ್ನ ಎಂಎಲ್ಎ ಫಂಡ್ ಹಾಕಿ ನೀರಾವರಿ ಮಾಡೋಣ” ಎಂದು ಶಾಸಕ ನಿಖಿಲ್ ಕತ್ತಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಹುಕ್ಕೇರಿ ರೈತರ ಪ್ರತಿಭಟನೆಗೆ ಆಗಮಿಸಿದ್ದ ವೇಳೆ ಅವರು, “ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬಳಿ ಹಣ ಇಲ್ಲ. ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ನೀಡುವ 2 ಸಾವಿರವನ್ನು ಕೂಡಿಸಿ, ನನ್ನ ಎಂಎಲ್ಎ ಫಂಡ್ ಸೇರಿಸಿ ನೀರಾವರಿ ಯೋಜನೆ ಮಾಡೋಣ” ಎಂದು ಹೇಳಿದ್ದಾರೆ.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದ್ದು, “ಮಹಿಳೆಯರ ಹಣದ ಮೇಲೆಯೇ ನಿಮ್ಮ ದೃಷ್ಟಿ ಏಕೆ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
“2019ರಲ್ಲೇ ಹುಕ್ಕೇರಿಯಲ್ಲಿ ಮಲ್ಲಿಕಾರ್ಜುನ ಏತ ನೀರಾವರಿ ಯೋಜನೆಯ ರೂಪುರೇಷೆ ಸಿದ್ಧವಾಗಿದ್ದರೂ, 900 ಕೋಟಿ ಅನುದಾನ ತರುವಲ್ಲಿ ವಿಫಲರಾದಿರಿ. ಆಗ ಯಾವ ಗ್ಯಾರಂಟಿ ಯೋಜನೆಗಳಿದ್ದವು?” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಾಗೆಯೇ, “50 ವರ್ಷಗಳಿಂದ ಹುಕ್ಕೇರಿ ಕ್ಷೇತ್ರದಲ್ಲಿ ಶಾಸಕರಾಗಿ ಹಾಗೂ ಸಚಿವರಾಗಿದ್ದರೂ, ಒಂದು ದೊಡ್ಡ ನೀರಾವರಿ ಯೋಜನೆ ತರಲು ಸಾಧ್ಯವಾಗಲಿಲ್ಲ” ಎಂದು ಕತ್ತಿ ಕುಟುಂಬದ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ.********************************






