ಬೆಳಗಾವಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದ ಸಂಸದ ಶ್ರೀ ಜಗದೀಶ ಶೆಟ್ಟರ್…!!

ಪ್ರಕೃತಿ ಬೆಳಗಾವಿ ಸುದ್ದಿ : ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಆರೋಗ್ಯವಂತ ಮಹಿಳೆ, ಸಶಕ್ತಿ ಕುಟುಂಬ ಅಭಿಯಾನದಡಿ ಆರೋಗ್ಯ ಕಾಪಾಡುವ ಕುರಿತು ಬೈಲಹೊಂಗಲ್ ತಾಲೂಕಿನ ಬೆಳವಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ ಶಿಬಿರವನ್ನು ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ಇವರು ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಹಾಂತೇಶ ಕೌಜಲಗಿ ಶಾಸಕರು ಬೈಲಹೊಂಗಲ್, ಶ್ರೀ ಜಗದೀಶ ಮೆಟಗುಡ್ಡ ಮಾಜಿ ಶಾಸಕರು ಬೈಲಹೊಂಗಲ, ಶ್ರೀ ಶಂಕರ ಮಾಡಲಗಿ ಜೆಡಿಎಸ್ ಜಿಲ್ಲಾಧ್ಯಕ್ಷರು, ಸುಭಾಸ ಪಾಟೀಲ ಭಾಜಪಾ ಜಿಲ್ಲಾಧ್ಯಕ್ಷರು, ಸುಭಾಷ್ ತುರಮರಿ ಭಾಜಪಾ ಮಂಡಲ್ ಅಧ್ಯಕ್ಷರು ಬೈಲಹೊಂಗಲ್, ಶ್ರೀ ಚಂದ್ರಶೇಖರಯ್ಯಾ ಕಾರಿಮನಿ ಅಧ್ಯಕ್ಷರು ಗ್ರಾಮ ಪಂಚಾಯತ್, ಗುರುಪಾದ ಕಳ್ಳಿ, ನಿಂಗಪ್ಪ ಚವಡಣ್ಣವರ, ಸಂತೋಷ ಹಡಪದ, ಲಕ್ಕಪ್ಪಾ ಕಾರಗಿ ಪ್ರಶಾಂತ ಅಮ್ಮಿನಭಾವಿ ಅವರೊಂದಿಗೆ ಡಾ. ಈಶ್ವರಪ್ಪ ಗಡಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ, ಡಾ. ಎಸ್.ಎಸ್ ಸಿದ್ದಣವರ ತಾಲೂಕು ಆರೋಗ್ಯಾಧಿಕಾರಿಗಳು ಬೈಲಹೊಂಗಲ ಇವರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.********************************






