ಪ್ರಕೃತಿ ಬೆಳಗಾವಿ

*ಜೂಜಾಟ ದಂಧೆಗೆ ಪೊಲೀಸ್ ಬೇಟೆ – 26 ಜೂಜುಕೋರ ಬಂಧನ, 1.60 ಲಕ್ಷ ರೂ. ಜಪ್ತಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮಹಾನಗರ ಹಾಗೂ ಉಪನಗರ ಪ್ರದೇಶಗಳಲ್ಲಿ ಅಕ್ರಮ ಜೂಜಾಟ ದಂಧೆ ವಿರುದ್ಧ ಬೆಳಗಾವಿ ಪೊಲೀಸರು ಸರಣಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಕಾಕತಿ ಮತ್ತು ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಆಟವಾಡುತ್ತಿದ್ದ 26 ಮಂದಿ ಜೂಜುಕೋರನ್ನು ಬಂಧಿಸಿ 1,60,465 ರೂ. ನಗದು ಜಪ್ತಿ ಮಾಡಲಾಗಿದೆ.

ಕಾಕತಿ ಠಾಣೆ ಪಿಎಸ್‌ಐ ಮೃತ್ಯುಂಜಯ ಮುಳವದ ನೇತೃತ್ವದ ತಂಡ ಜೂ.13 ಶುಕ್ರವಾರ ಹೊನಗಾ ಇಂಡಸ್ಟ್ರಿಯಲ್ ಏರಿಯಾದ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿತು. ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 20 ಮಂದಿ ಆರೋಪಿಗಳನ್ನು ಬಂಧಿಸಲಾಯಿತು.

ಬಂಧಿತ ಆರೋಪಿಗಳು :

ಯಾಸೀನ ಮಹಮ್ಮದ ಹುಸೇನ ತಹಶೀಲ್ದಾರ, ಆರೀಫ ಮಹಮ್ಮದಗೌಸ ಶಹಾಪುರಿ, ಮಹಮ್ಮದ ತಯ್ಯುಮ್ ಜತ್ರಿ, ಮನ್ಸೂರ ದಾವೂದಸಾಬ ಬಾಗವಾನ, ಸಹೇರಾಜ ಸ ಮಹಮ್ಮದಗೌಸ ಶಹಾಪುರಿ, ಫೈಜಾನ ಅಲ್ಲಾಪಹ ಮುಜಾವರ, ಶಾನೂರ ಬಾಳಪ್ಪ ಮುಚ್ಚಂದಿ, ಆರೀಫ ಅಜುರುದ್ದೀನ ಮುಲ್ಲಾ, ಸುನೀಲ ಅಷ್ಟೇಕರ, ದಸ್ತಗೀರಸಾಬು ನೂರಅಹ್ಮದ ದೇಸಾಯಿ, ವಾಸಿಮ ಕಾಸಿಮ ಮುಜಾವರ, ಅಲ್ಲಾಫ ರಾಸಿಂಸಾಬು ಮುಜಾವರ, ದಸ್ತಗಿರ ಅಜಮುದ್ದೀನ ಮುಲ್ಲಾ, ಆರೀಫ ಮಹಮ್ಮದಶಫಿ ರಾಕತೀಕರ, ಸಕಲನ ಹರೂನ ತಂಬಾಕವಾಲೆ, ಸಿರಾಜು ಅಬುಲಗಣಿ ಖಾಜಿ, ಅತಿಫ ರಫೀಕ ಸೋದಾಗರ, ಪ್ರಕಾಶ ಶಂಕರ ಬನ್ನೆ, ಗಣಪತಿ ರಾಮಪ್ಪ ಕೆಂಚವ್ವಗೋಳ, ಜಹಾಂಗೀರ ಅಬ್ದುಲ ನಾಯಕ.

ಆರೋಪಿಗಳಿಂದ 1,60,465 ರೂ. ನಗದು ಹಣ ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಲಾಗಿದೆ.

ಎಪಿಎಂಸಿ ಠಾಣೆ ಪಿಎಸ್‌ಐ ವಿಠಲ ಹಾವನ್ನವರ ನೇತೃತ್ವದ ತಂಡ ಶಾಹೂ ನಗರದ ಕೆರೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿತು. ಜೂಜಾಡುತ್ತಿದ್ದ ನಾಗೇಶ ಚಂದ್ರು ಹಮ್ಯಾರ, ಪ್ರಕಾಶ ಮಲಕಪ್ಪ ಲಮಾಣಿ, ರವಿ ರಾಮಪ್ಪ ಕಾರಬರಿ, ವಿನೋದ ಶಂಕರ ಹಮ್ಯಾರ, ರವಿ ಹಮ್ಯಾರ, ನಾಗೇಶ ತಾರಸಿಂಗ್ ರಾಠೋಡ ಸೇರಿ 6 ಮಂದಿಯನ್ನು ಬಂಧಿಸಲಾಯಿತು. ಅವರಿಂದ ನಗದು ಹಾಗೂ ಇಸ್ಪೀಟ್ ಎಲೆಗಳು ಜಪ್ತಿಯಾಗಿವೆ.

ಎರಡೂ ಪ್ರಕರಣಗಳಲ್ಲಿ ಕೆ.ಪಿ. ಕಾಯ್ದೆ ಕಲಂ 87ರ ಅಡಿ ಪ್ರತ್ಯೇಕ ಕೇಸ್ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಎರಡೂ ಯಶಸ್ವಿ ಕಾರ್ಯಾಚರಣೆ ನಡೆಸಿದ ಪಿಎಸ್‌ಐಗಳು ಹಾಗೂ ಸಿಬ್ಬಂದಿ ವರ್ಗದ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ನಗರದಲ್ಲಿ ಜೂಜಾಟ, ಡ್ರಗ್ಸ್, ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ನಿರಂತರ ದಾಳಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.***********************************

Leave a Reply

Your email address will not be published. Required fields are marked *

Back to top button