*2 ಕೋಟಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ*

ಪ್ರಕೃತಿ ಬೆಳಗಾವಿ ಸುದ್ದಿ : ಆಸ್ಪತ್ರೆಯಲ್ಲೇ ಗ್ಲುಕೋಸ್ ಬಾಟಲ್ ನಲ್ಲಿ ವಿಷ ಹಾಕಿ ಕೊಲೆ ಶಂಕೆ.
ಪತ್ನಿಯಿಂದಲೇ ಮಾಜಿ ಸೈನಿಕನ ಕೊಲೆ ಮಾಡಿರುವ ಶಂಕೆ.
ರಸ್ತೆ ಅಪಘಾತ ಆಗಿದ್ದನ್ನೇ ದಾಳವಾಗಿಸಿಕೊಂಡು ಮರ್ಡರ್.
ಮೂರು ತಿಂಗಳ ಬಳಿಕ ಹೊತ್ತಿದ್ದ ಶವವನ್ನ ಹೊರತೆಗೆದ ಅಧಿಕಾರಿಗಳು.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಘಟನೆ.
ಯಮಕನಮರಡಿ ಪೊಲೀಸರಿಂದ ಮುಚ್ಚಿ ಹೋಗಿದ್ದ ಪ್ರಕರಣ ಪತ್ತೆ.
ಘೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಮಾಂಜರಿ(45) ಕೊಲೆ.
ಹುಕ್ಕೇರಿಯಲ್ಲಿ ನಡೆದ ದೇವಿ ಜಾತ್ರೆ ಮುಗಿಸಿಕೊಂಡು ವಾಪಸ್ ಬರುವಾಗ ರಸ್ತೆ ಅಪಘಾತ.
ಅನಂತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಂದೀಪ್ ದಾಖಲು.
ಪ್ರಿಯಕರನೊಂದಿಗೆ ಸೇರಿ ಹೆಂಡತಿಯಿಂದ ಕೊಲೆಗೆ ಸಂಚು.
ಅನೈತಿಕ ಸಂಬಂಧ ಹೊರಬರಬಾರದು, ಗಂಡ ಸತ್ತರೆ ವಿಮೆ ಹಣ ಬರುತ್ತೆ ಎಂದು ಸ್ಕೆಚ್ ಹಾಕಿ ಕೊಲೆ.
ಪತ್ನಿ ಸುಮಾ ಮಾಂಜರಿ, ಪ್ರಿಯಕರ ಪುಂಡಲೀಕ ಎಂಬಾತನಿಂದ ಕೃತ್ಯ ಎಂದು ಕುಟುಂಬಸ್ಥರ ಆರೋಪ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡನಿಗೆ ಚಟ್ಟ ಕಟ್ಟಿದ ಐನಾತಿ ಹೆಂಡತಿ.
ಗ್ಲೂಕೋಸ್ ಬಾಟಲ್ ನಲ್ಲಿ ವಿಷ ಹಾಕಿ ಕೊಲೆ ಮಾಡಿದ್ದ ಪತ್ನಿ, ಪ್ರಿಯಕರ.
ಸಾವಿನ ಬಳಿಕ ಅನುಮಾನ ವ್ಯಕ್ತಪಡಿಸಿ ತನಿಖೆಗಿಳಿದಾಗ ಕೊಲೆ ರಹಸ್ಯ ಬೆಳಕಿಗೆ.
ಬೆಳಗಾವಿ ಎಸಿ ಶ್ರವಣಕುಮಾರ ಸಮ್ಮುಖದಲ್ಲಿ ಹೂತ್ತಿದ್ದ ಶವ ಹೊರಕ್ಕೆ.
ಶವದಲ್ಲಿನ ಅವಶೇಷಗಳನ್ನ ಮತ್ತೊಮ್ಮೆ ಎಫ್ಎಸ್ಎಲ್ ಗೆ ರವಾನೆ.
ಎಫ್ಎಸ್ಎಲ್ ನಿಂದ ವರದಿ ಬಂದ ಬಳಿಕ ಮುಂದಿನ ಕ್ರಮ.
ಈಗಾಗಲೇ ಪತ್ನಿ, ಪ್ರಿಯಕರ ಇಬ್ಬರಿಗೂ ತೀವ್ರ ವಿಚಾರಣೆ ನಡೆಸಿರುವ ಪೊಲೀಸರು.
ಎಫ್ಎಸ್ಎಲ್ ವರದಿ ಬಳಿಕ ಕೊಲೆಯ ರಹಸ್ಯ ಬಯಲು.
ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಕೇಸ್ ಪ್ರಕರಣ ದಾಖಲು.************************************











