ಪ್ರಕೃತಿ ಬೆಳಗಾವಿ

*ಕಾಂಗ್ರೆಸ್ ನಡೆ – ನಿಮ್ಮ ಮತ ರಕ್ಷಣೆ ಕಡೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ​ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ/ಗ್ರಾಮೀಣ/ಚಿಕ್ಕೋಡಿ) ಸಂಯುಕ್ತ ಆಶ್ರಯದಲ್ಲಿ ನಡೆದ “ಕಾಂಗ್ರೆಸ್ ನಡೆ – ನಿಮ್ಮ ಮತ ರಕ್ಷಣೆ ಕಡೆ” ಅಭಿಯಾನದಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪಾಲ್ಗೊಂಡಿದ್ದರು.

ಈ ಅಭಿಯಾನದ ಅಂಗವಾಗಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision) ಕುರಿತು ಈ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

​ಮತ ಹಕ್ಕು ರಕ್ಷಣೆ, ಸಂವಿಧಾನದ ಸಮರ ಹಾಗೂ ಪ್ರತಿ ಮತವನ್ನು ಉಳಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಆಂದೋಲನವನ್ನು ಯಶಸ್ವಿಗೊಳಿಸಲು ಮತ್ತು ಪ್ರತಿಯೊಬ್ಬ ಅರ್ಹ ಮತದಾರರ ಹಕ್ಕನ್ನು ಖಾತ್ರಿಪಡಿಸಲು ಕಾರ್ಯಕರ್ತರು ಸನ್ನದ್ಧರಾಗಬೇಕೆಂದು ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.**********************************

Leave a Reply

Your email address will not be published. Required fields are marked *

Back to top button