ಪ್ರಕೃತಿ ಬೆಳಗಾವಿ

ಕ್ರೀಡೆಯಲ್ಲಿ ಸೋಲು -ಗೆಲುವು ಮುಖ್ಯ ಅಲ್ಲ. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ನಿವೃತ್ತ ಮುಖ್ಯ ಶಿಕ್ಷಕ ಚಂದ್ರಯ್ಯ ಹಿರೇಮಠ…!!

ಸನ್.2024-25ನೇ ಸಾಲಿನ ಪಾಲಬಾವಿ -ಹಂದಿಗುಂದ ವಲದ ಕೇಂದ್ರ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ…

ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ಕ್ರೀಡೆಯಲ್ಲಿ ಸೋಲು -ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ, ವಿದ್ಯಾರ್ಥಿಗಳು ಸೋಲು -ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿ, ವಿದ್ಯಾರ್ಥಿಗಳು, ಕ್ರೀಡಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಸೋಲು- ಗೆಲುವಿನ ಮೆಟ್ಟಿಲುವಾಗಬೇಕು. ಸದೃಢವಾದ ಶರೀರದಲ್ಲಿ ಸದೃವಾದ ಮನಸ್ಸು ಅಡಗಿರುತ್ತದೆ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ನಿವೃತ್ತ ಮುಖ್ಯಗುರು ಚಂದ್ರಯ್ಯ ಹಿರೇಮಠ ಕ್ರೀಡಾ ಜ್ಯೋತಿ ಬರಮಾಡಿಕೊಂಡು ಮಾತನಾಡಿದರು.

ಅವರು ತಾಲೂಕಿನ ಪಾಲಬಾವಿ ಗ್ರಾಮದ ದಿ.ಮಲಗೌಡ ನಾಯಿಕ (ಪಾಟೀಲ) ಸರ್ಕಾರಿ ಪ್ರೌಢಶಾಲೆಯಲ್ಲಿ ಆಗಸ್ಟ್ 06ರಂದು ಮುಂಜಾನೆ 11ಗಂಟೆಗೆ ಜರುಗಿದ ಸನ್.2024- 25ನೇ ಸಾಲಿನ ಹಂದಿಗುಂದ ಹಾಗೂ ಪಾಲಬಾವಿ ವಲಯ ಕೇಂದ್ರಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಪ್ರೌಢಶಾಲೆಯ ಭೂದಾನಿ ತಾತಾಸಾಬಗೌಡ ಪಾಟೀಲ ಅಧ್ಯಕ್ಷತೆವಹಿಸಿದ್ದರು. ಹಿರಿಯರಾದ ಸಂಗಪ್ಪ ತುಪ್ಪದ, ಹುಲಿಯಪ್ಪ ತೇಗೂರ, ಸಾಗರ ಕುರಬೆಟ್ಟಿ, ಅಸ್ಲಾಂ ಬಿರಾದಾರ, ಮುಖ್ಯೋಪಾಧ್ಯಾಯ ಎ.ಜಿ.ಬಾದಾಮಿ, ಸಿಆರ್‌ಪಿಗಳಾದ ಆರ್‌.ಎಂ.ತೇಲಿ, ಆರ್.ಆರ್.ಬೀಸನಕೊಪ್ಪ, ಮುಖ್ಯಗುರು ಎಸ್.ಕೆ.ಬಡಿಗೇರ, ಎಂ.ಬಿ.ಬಡಿಗೇರ, ಗುತ್ತಿಗೆದಾರ ಸದಾಶಿವ ಪಟ್ಟಣಶೆಟ್ಟಿ, ಐ.ಟಿ.ಗಸ್ತಿ, ಮಹಾಂತೇಶ ಹಿರೇಮಠ, ಎಸ್.ಎಂ.ಚೂರಿ, ಶ್ರೀಮತಿ ಗೀತಾ ಸುತಾರ, ದೈಹಿಕ ಶಿಕ್ಷಕ ಬಿ.ಎಸ್.ಅಂದಾನಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ಬಿ.ಎಸ್.ಅಂದಾನಿ, ಯಾಕೂಬ್ ಮುಜಾವರ, ಶಿವಾನಂದ ದುಲ್ಹಾರಿ, ಎಂ.ಜಿ.ಬಂಗಿ, ಆರ್.ಟಿ.ಗಸ್ತಿ, ಸಂಜಯ ಹಿಪ್ಪರಗಿ, ಎಸ್.ಎನ್.ಗೊಂದಕರ, ಪ್ರವೀಣ ಕಾಪಿಸಿ, ಸಿ.ಡಿ.ಸರಿಕರ, ಶಿರಾಜ್ ಬಿರಾದಾರ, ಶ್ರೀಮತಿ ಜಯಶ್ರೀ ಕಂಬಾರ, ಶಾಂತಕುಮಾರ ಬೆಳ್ಳಿಕಟ್ಟಿ, ಸಿ.ಬಿ.ಭೋಜನವರ, ಎಸ್.ಎಸ್. ಹುಕ್ಕೇರಿ, ಎ.ವ್ಹಿ.ಹಿಡಕಲ್ಲ, ಆನಂದ ಶಿರೋಳ, ಸಿ.ಎಸ್.ಹೊಸಪೇಟಿ, ಅಬ್ಬಾಸಅಲಿ ತಾನಟಗಿ, ವೈ.ಎನ್. ಜಕನೂರ, ಬಿ.ಎಸ್. ಸವದತ್ತಿ, ಎಸ್.ಎಸ್.ಬಾಡಗಿ, ಆರ್.ಎಸ್. ಮಾಸಣ್ಣವರ ಕಾರ್ಯನಿರ್ವಹಿಸಿದರು.***********************

ದೈಹಿಕ ಶಿಕ್ಷಕರುಗಳಾದ ಅಶೋಕ ಗಸ್ತಿ ಸ್ವಾಗತಿಸಿದರು, ಎಸ್.ಎನ್.ಬುರ್ಲಟ್ಟಿ ನಿರೂಪಿಸಿದರು. ಎಂ.ಕೆ.ಸಂಗಾನಟ್ಟಿ ಪರಿಚಯಿಸಿದರು, ಸಿ.ಎಸ್.ಹಿರೇಮಠ ವಂದಿಸಿದರು.

Back to top button