ಪ್ರಕೃತಿ ಬೆಳಗಾವಿ

ಗ್ರಾಮದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಿರುವುದು ಖಡಿಸಿ ಧರಣಿ ಸತ್ಯಾಗ್ರಹ: ಹುಲೆಪ್ಪ ತೇಗೂರ…!!

ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ತಾಲೂಕು ಪಾಲಬಾವಿ ಗ್ರಾಮದಲ್ಲಿ ಸಾಯಿ ಬಾರ್ ಆಂಡ್ ರೆಸ್ಟೋರೆಂಟ್ ನಡೆಸಲು ಗ್ರಾಮ ಪಂಚಾಯತ್ ಅವರು ಈ ಹಿಂದೆ ಜೂನ್ 24ರಂದು ಗ್ರಾಮ ಪಂಚಾಯಿತಿಯಲ್ಲಿ ಸಭೆ ಕರೆದು ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿರುವರಿಂದ ಗ್ರಾಮಸ್ಥರು ರೊಚ್ಚಿಗೆದ್ದು ಹುಲೆಪ್ಪ ತೇಗೂರ ಹಾಗೂ ಮಾಜಿ ಗ್ರಾಪಂ ಅಧ್ಯಕ್ಷ ಭರಮಪ್ಪ ನಿಂಗನೂರ ನೇತೃತ್ವದಲ್ಲಿ ಕಳೆದ ಜೂನ್ 25ರಂದು ತಾಲೂಕು ಪಂಚಾಯಿತ ರಾಯಬಾಗ, ಗ್ರಾಮ ಪಂಚಾಯತ್ ಪಾಲಬಾವಿ ಕಚೇರಿಗೆ ತೆರಳಿ ಬಾರ್ ಆಂಡ್ ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಿರುವುದನ್ನು ರದ್ದು ಪಡಿಸಬೇಕೆಂದು 50ಕ್ಕೂ ಹೆಚ್ಚು ಗ್ರಾಮಸ್ಥರು ಸಹಿ ಮಾಡಿದ ಅರ್ಜಿಯನ್ನು ದೂರ ಸಲ್ಲಿಸಿದ್ದರು.

ರಾಯಬಾಗ ತಾಲೂಕು ಪಂಚಾಯಿತಿಗೆ ಹಾಗೂ ಪಾಲಬಾವಿ ಗ್ರಾಮ ಪಂಚಾಯಿತಿಗೆ ದೂರು ಕೊಟ್ಟು ಒಂದು ತಿಂಗಳು ಕಳೆದರೂ ಗ್ರಾಮಸ್ಥರ ಅರ್ಜಿಗೆ ಸೊಪ್ಪು ಹಾಕದ ಅಧಿಕಾರಿಗಳ ನಡೆಯನ್ನು ಖಂಡಿಸಿ. ಕಳೆದ ಜೂನ್ 20ರಂದು ಸಾಯಿ ಬಾರ್ ಮತ್ತು ರೆಸ್ಟೋರೆಂಟ್ ನಡೆಸಲು ಪಂಚಾಯತಿಯವರು ನೀಡಿದ ಉದ್ಯೋಗ ನಡೆಸಲು ಅನುಮತಿ (ಲೈಸೆನ್ಸ್) ರದ್ದು ಪಡಿಸಬೇಕೆಂದು
ಇಂದು ಬುಧವಾರ ಜುಲೈ 7ರಂದು ಮುಂಜಾನೆ 8ಗಂಟೆಗೆ ಗ್ರಾಮ ಪಂಚಾಯಿತ್ ಕಾರ್ಯಾಲಯಕ್ಕೆ ನೂರಾರು ಗ್ರಾಮಸ್ಥರು ಮುತ್ತಿಗೆ ಹಾಕಿ, ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಹುಲೆಪ್ಪ ತೇಗೂರ, ಬರಮಪ್ಪ ನಿಂಗನೂರ ಪಂಚಾಯಿತಿ ಸಿಬ್ಬಂದಿ ರಮೇಶ ಪಾಟೀಲ ಅವರಿಗೆ ದೂರು ಸಲ್ಲಿಸಿ, ನಂತರ ಪತ್ರಿಕಾಗೋಷ್ಠಿ ನಡೆಸಿದರು.

ಬಾಕ್ಸ್ ಲೈನ್ ==

“ಪಾಲಬಾವಿ ಗ್ರಾಮದಲ್ಲಿ ಮುಗಳಖೋಡ -ಮಹಾಲಿಂಗಪುರ ಕೂಡುವ ಮುಖ್ಯ ರಸ್ತೆಯ ಪಕ್ಕದಲ್ಲಿ ಆಸ್ತಿ ನಂಬರ್ 1211/1 ಹಾಗೂ 1211/2 ರಲ್ಲಿ ಹೊಸದಾಗಿ ಬಾರ್ ಮತ್ತು ಲಾಡ್ಜ್ ನಡೆಸಲು ಪರವಾನಿಗೆ ನೀಡಬಾರದೆಂದು ಸ್ಥಳೀಯ ನಿವಾಸಿ ಪ್ರಭಾಕರ ಕುರುಬೆಟ್ಟಿ ಅವರು ಕಳೆದ ಜುಲೈ 4ರಂದು ನಮ್ಮ ಕಚೇರಿಗೆ ದೂರನ್ನು ನೀಡಿದ್ದರು. ಸಂಬಂಧಪಟ್ಟ ದೂರಿನ ಅನ್ವಯ ನಮ್ಮ ರಾಯಬಾಗ ತಾಲೂಕ ಅಬಕಾರಿ ಕಚೇರಿಗೆ ಪಾಲಬಾವಿ ಗ್ರಾಮದಲ್ಲಿ ಬಾರ್ ಹಾಗೂ ಲಾಡ್ಜ್ ನಡೆಸಲು ಯಾವ ಅರ್ಜಿಯು ಬಂದಿರುವುದಿಲ್ಲ”
===} ಸಿಪಿಐ ಚಂದರಗಿ

(ಅಬಕಾರಿ ನಿರೀಕ್ಷಕ ಕಚೇರಿ ರಾಯಬಾಗ)

Back to top button