ಕಾನೂನು ಅರಿವು ತರಬೇತಿ ಕಾರ್ಯಕ್ರಮ ಮಾನಸ- ಸಿಕ್ರಂ ಸಂಸ್ಥೆ…!!
ಪ್ರಕೃತಿ ಬೆಳಗಾವಿ ಸುದ್ದಿ : ಮಾನಸ- ಸಿಕ್ರಂ ಸಂಸ್ಥೆ ವತಿಯಿಂದ ಪ್ಯಾರಲಿಗಲ್ ತರಬೇತಿ ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಯರೊಂದಿಗೆ ಹಮ್ಮಿಕೊಳ್ಳಲಾಗಿತ್ತು. ವಕೀಲರಾದ ಸುನಿತಾ ಹೊನ್ನನವರ ಎಲ್ಲರಿಗೂ ಸ್ವಾಗತ ಕೋರುತ್ತಾ ಕಾರ್ಯಕ್ರಮವನ್ನು ಪ್ರಾರಂಭಿಸಿದರು.ಉಚಿತ ಕಾನೂನು ಸಲಹಾ ಪ್ರಾಧಿಕಾರ ದಿಂದ ಸುಜಾತಾ ರವರು ಕಾರ್ಯಕ್ರಮ ಉದ್ದೇಶಿಸಿ ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯ ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ, ಬಾಲಾಪರಾಧಿ, ಹಾಗೂ ಇನ್ನಿತರ ಸಮಸ್ಯೆಗಳು ಇದ್ದಲ್ಲಿ ನಮ್ಮನ್ನು ಸಂಪರ್ಕಿಸಿ ಉಚಿತ ಕಾನೂನು ಸಲಹೆ ಕೊಡುತ್ತೇವೆ ಹಾಗೂ ಅಂತಹ ಸಮಸ್ಯೆಗಳಿದ್ದರೆ ನಾವು ಆ ಪ್ರಕರಣವನ್ನು ದಾಖಲು ಮಾಡಲು ಉಚಿತವಾಗಿ ವಕೀಲರನ್ನು ನೇಮಿಸಿ ಕೊಡುತ್ತೇವೆ. ಹಾಗೂ ಜನನ ಪ್ರಮಾಣ ಪತ್ರ , ವಿವಾಹ ನೋಂದಣಿಯನ್ನು ಮಾಡಿಸಿಕೊಡುತ್ತೇವೆ ಆದಕಾರಣ ತಾವು ಇನ್ಸೂರೆನ್ಸ್ ಪಾಲಿಸಿ, ಸ್ಕೂಟಿ ಲೈಸೆನ್ಸ್ , ಇತರ ಎಲ್ಲ ನೊಂದಣಿದನೆಗಳನ್ನು ಕಾನೂನು ಬದ್ಧವಾಗಿ ಮಾಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಭ್ರಷ್ಟಾಚಾರ ನಿರ್ಮೂಲನ ಸಂಘಟನೆಯ ಅಧ್ಯಕ್ಷರಾದ ನೇತಾಲಿಯನ್ ಕರುಣಾಕರ ರವರು ಐದು ಪ್ರಮುಖ ಮಹಿಳೆಯರ ಹಕ್ಕುಗಳ ಕುರಿತು ವಿವರಿಸಿದರು ಇಂದಿನ ಮಹಿಳೆಯರು ಹಿಂಸೆ ಮತ್ತು ತಾರತಮ್ಯದಿಂದ ಮುಕ್ತರಾಗಿ ಬದುಕುವ ಹಕ್ಕನ್ನು ಪಡೆದುಕೊಂಡಿದ್ದಾರೆ. ಅತ್ಯುನ್ನತ ಮಾನಸಿಕ ಮತ್ತು ದೈಹಿಕ ಆರೋಗ್ಯದ ಗುಣಮಟ್ಟವನ್ನು ಆನಂದಿಸಲು, ಹಾಗೂ ವಿದ್ಯಾವಂತರಾಗಲು , ಆಸ್ತಿಯಲ್ಲಿ ಸಮಪಾಲು ಹೊಂದಲು, ಮತ ಹಾಕಲು, ಸಮಾನ ವೇತನ ಗಳಿಸಲು ಪ್ರಪಂಚದಾದ್ಯಂತ ಇಂದಿನ ಮಹಿಳೆಯರು ಮತ್ತು ಹುಡುಗಿಯರು ತಾರತಮ್ಯದ ವಿರುದ್ಧ ತಮ್ಮ ಗುಣಮಟ್ಟದ ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಎಂದು ತಿಳಿಸಿಕೊಟ್ಟರು. 3.ಮಾನಸ ಸಿಕ್ರಮ ಸಂಸ್ಥೆಯ ಜಿಲ್ಲಾ ಸಂಯೋಜಿಕಿಯಾದ ಮೀನಾಕ್ಷಿ ತಳವಾರ್ ಇವರು ಪ್ಯಾರಲಿಗಲ್ ತರಬೇತಿ ಅಂದರೆ ಕಾನೂನುಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು, ಅರ್ಥ ಮಾಡಿಕೊಳ್ಳುವುದು, ಹಾಗೂ ಕಾನೂನಿನ ಚೌಕಟ್ಟಿನ ಒಳಗೆ ಕೆಲಸ ಕಾರ್ಯಗಳನ್ನು ನಿರ್ವಹಿಸುವುದಾಗಿದೆ. ಕಾನೂನು ಅರಿವು ಪಡೆದುಕೊಳ್ಳುವುದು ಪ್ರತಿಯೊಬ್ಬ ಮಗು ಅಥವಾ ವ್ಯಕ್ತಿಯ ಅತಿ ಅವಶ್ಯಕ ಕರ್ತವ್ಯವಾಗಿದೆ. ಒಂದು ಮಗು ಜನಿಸಬೇಕಾದರೆ ಆ ಮಗು ತನ್ನ ತಾಯಿಯ ಗರ್ಭದಲ್ಲಿ ಇರುವಾಗಲೇ ಬದುಕುವ ಅಥವಾ ಜೀವಿಸುವ ಹಕ್ಕನ್ನು ಪಡೆದುಕೊಳ್ಳುತ್ತದೆ. ಪ್ರತಿಯೊಂದು ಮಗು ತನ್ನ ಅಗತ್ಯತೆಗಳಾದ ಪೌಷ್ಟಿಕ ಆಹಾರ, ನೀರು , ಆರೋಗ್ಯ, ರಕ್ಷಣೆ, ವಸತಿ, ಮುಂತಾದವು ಪಡೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ. ಆದ್ದರಿಂದ ಸಮಾಜದ ಪ್ರತಿಯೊಬ್ಬರಿಗೂ ಈ ಕಾನೂನು ಅರಿವು ತಿಳಿದುಕೊಳ್ಳುವುದು ಹಾಗೂ ಇನ್ನೊಬ್ಬರಿಗೆ ತಿಳಿಸುವುದು ಕೂಡ ಅತಿ ಮುಖ್ಯವಾದ ಕರ್ತವ್ಯವಾಗಿದೆ ಎಂದು ಮಾತನಾಡಿದರು.
ಕಾನೂನು ವಿದ್ಯಾರ್ಥಿನಿ ಯಾದ ಫರೀದಾ ದೇಸಾಯಿ ಇವರು ಕಾರ್ಯಕ್ರಮ ಉದ್ದೇಶಿಸಿ ಮಕ್ಕಳ 4 ಹಕ್ಕುಗಳಾದ ಜೀವಿಸುವ ಹಕ್ಕು, ರಕ್ಷಣೆ ಹಕ್ಕು, ವಿಕಾಸ ಹೊಂದುವ ಹಕ್ಕು, ಹಾಗೂ ಭಾಗವಹಿಸುವ ಹಕ್ಕು, ಮಕ್ಕಳು ರಕ್ಷಣೆಯ ಜೊತೆಗೆ ಬೌದ್ಧಿಕವಾಗಿ ವಿಕಾಸ ಹೊಂದುವ , ಹಾಗೂ ಪ್ರತಿಯೊಂದು ಚಟುವಟಿಕೆಗಳಲ್ಲಿ ಅಥವಾ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವ ಹಕ್ಕನ್ನು ಹೊಂದಿರುತ್ತಾರೆ.
ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಬೌದ್ಧಿಕ ವಿಕಾಸ ಹೊಂದಲು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ ದೊರಕಿದಂತಾಗುತ್ತದೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಮುದಾಯಗಳಲ್ಲಿ ಹೆಚ್ಚಾಗಿ ಸಂಪರ್ಕವಿರುವುದರಿಂದ ಬಾಲ್ಯ ವಿವಾಹ ನಡೆಯುವಂತಹ ಸಂದರ್ಭಗಳಲ್ಲಿ 1098 ಗೆ ಕರೆ ಮಾಡಿ ಮಾಹಿತಿ ಕೊಟ್ಟರೆ ಅಂತಹ ಬಾಲ್ಯವಿವಾಹಗಳನು ತಡೆಯಬಹುದು ಎಂದು ತಿಳಿಸಿದರು. ಕಾನೂನು ವಿದ್ಯಾರ್ಥಿಗಳಾದ ನಿರ್ಮಲ ದೊಡ್ಮನಿ, ಅಕ್ಷತಾ ನಡುಗೇರಿ, ಸುಧಾ ಇಟ್ನಾಳ್, ಇನ್ನು ಮುಂತಾದವರು ಭಾಗವಹಿಸಿದ್ದರು ಕೊನೆಗೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.ಸ್ಥಳ: ಕನ್ನಡ ಸಾಹಿತ್ಯ ಭವನ ಚನ್ನಮ್ಮ ಸರ್ಕಲ್ ಬೆಳಗಾವಿ ಕಾನೂನು ಅರಿವು ತರಬೇತಿ ಕಾರ್ಯಕ್ರಮ ಮಾನಸ- ಸಿಕ್ರಂ ಸಂಸ್ಥೆ.*****************






