ಪ್ರಕೃತಿ ಬೆಳಗಾವಿ

ಪ್ರಿಯಾಂಕಾ ಜಾರಕಿಹೊಳಿ ಸಂಸದರು ಬೂತ ಮಟ್ಟದ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭ…!!

ಚಿಕ್ಕೋಡಿ ಬ್ರೇಕಿಂಗ್…

ಪ್ರಕೃತಿ ಬೆಳಗಾವಿ ಸುದ್ದಿ : ನೂತನ ಸಂಸದರ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಭಾಷಣ

ಹಾರೂಗೇರಿಯಲ್ಲಿ ನಡೆದ‌‌ ಸಮಾವೇಶದಲ್ಲಿ ಸತೀಶ ಗುಡುಗು

ತಮ್ಮ ವಿರೋಧಿಗಳ‌ ವಿರುದ್ಧ ಹರಿಹಾಯ್ದ ಸಚಿವ ಸತೀಶ ಜಾರಕಿಹೊಳಿ

ಶಾಸಕ‌ ಮಹೇಂದ್ರ ತಮ್ಮನ್ನವರ್ ವಿರುದ್ಧ ಮತ್ತೆ ‌ಹರಿಹಾಯ್ದ ಸಚಿವ ಸತೀಶ

೨೨ ಸಾವಿರ ಲೀಡ್ ಕೊಟ್ಟಿದ್ದೆನೆ ಎಂದಿದ್ದ ಮಹೇಂದ್ರ ತಮ್ಮನ್ನವರ್

ವೇದಿಕೆಯಲ್ಲಿ ಮಹೇಂದ್ರ ತಮ್ಮನ್ನವರ್ ವಿರುದ್ಧ ಗುಡುಗಿದ ಸಚಿವ ಸತೀಶ

ಕುಡಚಿ ಒಂದೇ ಊರಲ್ಲಿ ೧೮ ಸಾವಿರ ಮತಗಳು ಬಂದಿವೆ

ಇನ್ನು ನಾಲ್ಕು ಸಾವಿರ ಮತಗಳು ಮಾತ್ರ ಉಳಿದವು

ಕಳೆದ ಬಾರಿ ನಿಮಗೆ ಬಿದ್ದ ಮತಗಳು ಬಿಜೆಪಿಗೆ ಹೋಗಿವೆ ಎಂದ ಸತೀಶ

ಸುಮ್ಮನೆ ಆರೋಪ‌ ಮಾಡಲು ನಾನು ಖಾಲಿ ಇಲ್ಲ

ಯಾರು‌ ಕೆಲಸ‌ ಮಾಡಿಲ್ಲ‌ ಅವರ ವಿರುದ್ಧ ಆರೋಪ‌ ಮಾಡಿದ್ದೆನೆ

ಎಲ್ಲಾ ಕಡೆ ಮೋಸ ಆಗಿದ್ದರೆ ನಾವು ಗೆಲ್ಲುವುದು ಕಠಿಣ ಆಗ್ತಿತ್ತು

ತಪ್ಪಾಯ್ತು ಎಂದು ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದು ಒಳ್ಳೇದು

ರಾಜಕೀಯದಲ್ಲಿ ಹೊಂದಾಣಿಕೆ‌ ಇರಬೇಕು ಸರಿಪಡಿಸಿಕೊಳ್ಳಬೇಕು

ನಮ್ಮನ್ನ ಸೋಲಿಸಲು ಎಲ್ಲಿಂದ‌ ಡೈರೆಕ್ಷನ್‌ಬಂದಿದೆ ಎಂದು ನನಗೆ ಗೊತ್ತಿತ್ತು

ಘಾಟಗೆಯವರ ಚಾಡಿ ಮಾತು ಕೇಳ್ತಾರೆ ಅಂತ ಹೇಳಿದ್ರು

ನಾನು ಘಾಟಗೆ ಅಲ್ಲ ನನ್ನ ಹೆಂಡತಿ ಮಕ್ಕಳ ಮಾತೂ ಕೇಳಲ್ಲ ಎಂದ ಸತೀಶ

ಅವರ ಕೆಲಸ ಇದ್ರೆ ಅವರ ಕೆಲಸ ನಾವು ಮಾಡ್ತಿವಿ

ನಿಮ್ಮದಿದ್ರೆ ನಿಮ್ಮ ಕೆಲಸ ಮಾಡ್ತಿವಿ ಘಾಟಗೆ ಮಾತು ‌ಕೇಳ್ತಾರೆ ಅಂತ ಹೇಳ್ತಾರೆ

ಘಾಟಗೆ ಹಾಗೂ ನೀವು ಕುಸ್ತಿ ಹಿಡಿರಿ ಈಗ ಚುನಾವಣೆಗೆ ನಿಂತಿದ್ದು ನಾವು

ಮಾಜಿ ಶಾಸಕ‌ ಶ್ಯಾಮ್ ಘಾಟಗೆ ನೀವು ಕುಸ್ತಿ ಹಿಡಿರಿ

ನಮ್ಮ ಚುನಾವಣೆಗೆ ಯಾಕೆ ತೊಂದ್ರೆ ಮಾಡಿದ್ರಿ ಎಂದು ಪ್ರಶ್ನಿಸಿದ ಸತೀಶ

ನಿಮಗೆ ಟಿಕೇಟ್ ಕೊಡಿಸಿ ಸಪೋರ್ಟ್ ಮಾಡಿದ್ವಿ ನೀವ್ಯಾಕೆ‌ ಹೀಗೆ ಮಾಡಿದ್ರಿ

ಇನ್ನು ನೀವು ಸಣ್ಣವರಿದ್ದಿರಿ ಇನ್ನು ಈಗ ಎಲ್ ಬೋರ್ಡ್ ಇದ್ದಿರಿ

ಈಗ ಒಂದು ವರ್ಷ ಆಯ್ತು ಅಷ್ಟೆ ಬಹಳ‌ ಸ್ಲೋ‌ ಇರಬೇಕು

ಗಾಡಿ ಸ್ಲೋ ಇರಬೇಕು ಬೀಳಬಾರದು ಬಿದ್ದರೆ ಆರ್ ಟಿ ಒ‌ಲೈನ್ಸ್ ಕೊಡಲ್ಲ‌ ಎಂದ ಸತೀಶ

ಆರ್ ಟಿ ಒ ಕೈಯಲ್ಲಿ ದಾಟಬೇಕು ಎಲ್ಲ ಪರಿಶೀಲಿಸಿ ನಂತರ ಲೈಸನ್ಸ್ ಕೊಡ್ತಾರೆ

ತಮ್ಮನ್ನು ತಾವು ಆರ್ ಟಿ ಒ ಗೆ ಹೋಲಿಸಿಕೊಂಡು ತಮ್ಮನ್ನವರ್ ವಿರುದ್ಧ ಆಕ್ರೋಶ

ಕೇವಲ ತಮ್ಮನ್ನವರ್ ಮಾತ್ರ ಅಲ್ಲ‌ ನಮ್ಮ ವಿರುದ್ದ‌ ಹೇಳಿಕೆ ಕೊಡುವವರು ರಾಜ್ಯದ ತುಂಬ ಇದ್ದಾರೆ

ದೇವೆಗೌಡ,ಸಿದ್ದರಾಮಯ್ಯ,‌ಯಡಿಯೂರಪ್ಪ ಎಷ್ಟು ಜನರನ್ನ‌‌‌ ಬೆಳೆಸಿದರು ಅವರನ್ನು ಬೈತಾರೆ

ನಾವು ಇದನ್ನ ಗಂಭೀರವಾಗಿ ಪರಿಗಣಿಸಲ್ಲ ಆದರೆ ಬೇಟೆ ಸಿಗೋದನ್ನ ಕಾಯ್ತಾ ಕೂರ್ತಿವಿ

ರಾಜಕಾರಣ ಯಾರ ಮನೆಯ ಆಸ್ತಿಯೂ ಅಲ್ಲ

ಜನ ಯಾರನ್ನ ಬೇಕಾದ್ರೂ ಗೆಲ್ಲಿಸ್ತಾರೆ ಯಾರನ್ನ‌‌‌‌‌ ಬೇಕಾದ್ರೂ ಸೋಲಿಸ್ತಾರೆ

ಮೋದಿಯವರ ಕೈ ಹಿಡಿಯುವವರೇ ಇಲ್ಲ ಎಂಬುದಿತ್ತು

ನಮ್ಮ‌ತಲೆಯಲ್ಲಿ ಒಂದು ಭ್ರಮೆ‌ಇತ್ತು ಜನ ಅವರನ್ನ ಒಂದೇ ಎಲೆಕ್ಷನ್ ನಲ್ಲಿ ಕೆಳಗೆ ತಂದು ಹಚ್ಚಿದರು

ಬೇರೆ ಪಕ್ಷಗಳಿಗೆ ಭವಿಷ್ಯ ಇಲ್ಲ‌ ಎಂದು ಎಲ್ಲರೂ ಬಿಜೆಪಿಗೆ ಹೊರಟಿದ್ರು

ಆದರೆ ಒಂದೇ‌ ಚುನಾವಣೆ ಜನ ಎಲ್ಲಾ ಸಾಧ್ಯ ಇದೆ ಎನ್ನುವುದು ತೋರಿಸಿದರು

ಯಾರನ್ನಾದ್ರೂ ಗೆಲ್ಲಿಸ್ತಿವಿ ಸೋಲಿಸ್ತಿವಿ ಎಂದು ತೋರಿಸಿಕೊಟ್ಟಿದ್ದಾರೆ

ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಲು ಕಲಿಯಬೇಕು ಎಂದ ಸತೀಶ ಜಾರಕಿಹೊಳಿ.*********************

Back to top button