ಪ್ರಕೃತಿ ಬೆಳಗಾವಿ

ಸರ್ವರಿಂದ ಪರಿಸರ ಉಳಿಸಿ ಬೆಳೆಸುವ ಕಾರ್ಯವಾಗಲಿ: ಸಚಿವ ಸತೀಶ್‌ ಜಾರಕಿಹೊಳಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ಮುಂದಿನ ಪೀಳಿಗೆಗಾಗಿ ಸರ್ವರೂ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಗೋಕಾಕ ನಗರದ ಎನ್ಎಸ್ಎಫ್ ಪ್ರೌಢಶಾಲಾ ಆವರಣದಲ್ಲಿ ಘಟಪ್ರಭಾ ಅರಣ್ಯ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿ ನೆಟ್ಟು, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಭೂಮಿಯ ಮೇಲೆ ವಾಸಿಸುತ್ತಿರುವ ಎಲ್ಲ ಜೀವ ರಾಶಿಗಳಿಗೂ ಅತ್ಯವಶ್ಯಕವಾಗಿರುವ ಈ ಪರಿಸರವನ್ನು ಹಾಳು ಮಾಡದೆ ಸಂರಕ್ಷಿಸುವ ಕುರಿತು ಜನಜಾಗೃತಿ ಮೂಡಿಸೋಣ. ಪರಿಸರ ನೆಮ್ಮಲ್ಲರ ಉಸಿರು. ಅರಣ್ಯ ಉಳಿದರೇ ನಾಡು ಉಳಿಯುತ್ತದೆ. ನೀರು, ಹವಾಮಾನ, ಭೂಮಿ ಮಾಲಿನ್ಯವಾಗದಂತೆ ಕಾಪಾಡಿಕೊಳ್ಳಬೇಕು. ಎಲ್ಲರೂ ಪರಿಸರ ಸ್ನೇಹಿ ಜೀವನ ಅಳವಡಿಸಿಕೊಂಡಲ್ಲಿ ಪರಿಸರ ಸಂರಕ್ಷಣೆ ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.***************************

Back to top button