ಪ್ರಕೃತಿ ಬೆಳಗಾವಿ

ಜಗತ್ತು ಅಜ್ಞಾನ ಅಂದಕಾರದಲ್ಲಿ ಮುಳುಗಿದಾಗ, ಜಗತ್ತಿನ ಉದ್ಧಾರಕ್ಕಾಗಿ ಅವತರಿಸಿ ಬಂದ ದೇವಮಾನ ಭಗವಾನ್ ಬುದ್ಧರು: ಸಾಹಿತಿ ಟಿ.ಎಸ್.ವಂಟಗೂಡಿ…!!

ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ಜಗತ್ತು ಅಜ್ಞಾನ ಅಂದಕಾರದಲ್ಲಿ ಮುಳುಗಿದಾಗ, ಜಗತ್ತಿನ ಉದ್ಧಾರಕ್ಕಾಗಿ ಅವತರಿಸಿ ಬಂದ ದೇವಮಾನ ಭಗವಾನ್ ಬುದ್ಧರು. ಜೀವನವು ದುಃಖಮಯವಾಗಿದೆ. ಆಸೆಗಳನ್ನು ಬಿಟ್ಟು ದುಃಖಗಳನ್ನು ನಿವಾರಿಸಬೇಕು. ಮಾದಕ ವಸ್ತುಗಳನ್ನು ಸೇವಿಸಬಾರದು, ಸುಳ್ಳು, ಕಪಟ, ಮೋಸ, ವಂಚನೆ ಮಾಡಬಾರದು ಎಂದು ಜಗತ್ತಿಗೆ ಸಾರಿ ಹೇಳುವುದರ ಮೂಲಕ. ಸರ್ವರಲ್ಲಿ ಸಮಾನತೆ, ಶಾಂತಿ, ದಯೆ ಕರುಣಿಸಿದವರು ಬುದ್ಧರು. ಬುದ್ಧನ ತತ್ವಾದರ್ಷಗಳು ವಿಶ್ವಕ್ಕೆ ಬೆಳಕಾಗಿವೆ ಎಂದು ತಾಲೂಕು ಕಸಪಾ ಗೌರವ ಕಾರ್ಯದರ್ಶಿ, ಸಾಹಿತಿ ಟಿ.ಎಸ್. ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು.

ಅವರು ರಾಯಬಾಗ ತಾಲೂಕು ಹಿಡಕಲ್ಲ ಗ್ರಾಮದ ಜೈ ಭೀಮ್ ನಗರದಲ್ಲಿ ಶುಕ್ರವಾರ ದಿ: 24ರಂದು ಸಂಜೆ 7ಗಂಟೆಗೆ ಹಮ್ಮಿಕೊಂಡ ಭಗವಾನ್ ಬುದ್ಧರ 2568ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಜೀವನವು ದುಃಖಮಯವಾಗಿದೆ, ಆಸೆ ದುಃಖಕ್ಕೆ ಕಾರಣವಾಗಿದೆ, ಆಸೆಗಳನ್ನು ಬಿಟ್ಟು ದುಃಖಗಳನ್ನು ನಿವಾರಿಸಬೇಕು, ಸದಷ್ಟಾಂಗ ಮಾರ್ಗವು, ಆಸೆಗಳನ್ನು ನಿರೋಧಿಸುವ ಮತ್ತು ಜನನ -ಮರಣ ಚಕ್ರದಿಂದ ಮುಕ್ತಗೊಳಿಸುವ ಅನೇಕ ಸಂದೇಶಗಳು ಬುದ್ಧನ ಸಾಧನಗಳಾಗಿವೆ ಎಂದರು.

ಯುವ ಧುರೀಣ ಬಸವರಾಜ ಪಾರ್ಥನಳ್ಳಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಶೇಖರ ಪಾರ್ಥನಲ್ಲಿ, ವಿಠ್ಠಲ ನಡುಕೇರಿ, ಕೃಷ್ಣಪ್ಪ ಪೂಜೇರಿ, ಸಚಿನ ಪಾರ್ಥನಳ್ಳಿ, ಮುರುಗೇಂದ್ರ ಹಿಪ್ಪರಗಿ, ಗಜಾನಂದ ನಡುಕೇರಿ, ಸಿದ್ಧಾರೂಢ ಪಾರ್ಥನಳ್ಳಿ, ನಿರಜ್ ಯಲಡಗಿ, ಭೀಮು ನಡುಕೇರಿ, ರಮೇಶ ಪಾರ್ಥನಳ್ಳಿ, ಉಮೇಶ ಕಾಂಬಳೆ, ಮುತ್ತು ದಂಡಿ ಇತರರು ಇದ್ದರು. ಸಚಿನ ಪಾರ್ಥನಳ್ಳಿ ಸ್ವಾಗತಿಸಿ ನಿರೂಪಿಸಿದರು, ಉಮೇಶ ಕಾಂಬಳೆ ವಂದಿಸಿದರು.***************************

Back to top button