ಹಿಡಕಲ್ಲ 27 ಹಾಗೂ 28ರಂದು ಶಿವಯೋಗಿ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ…!!
8ನೇ ಅಮೋಘಸಿದ್ದೇಶ್ವರ ಬ್ರಹತ್ ಜಾತ್ರಾ ಮಹೋತ್ಸವ, “ಸಿದ್ದರ ಭೇಟಿ”…
ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ತಾಲೂಕಿನ ಹಿಡಕಲ್ಲ ಗ್ರಾಮದ ಅಳಗವಾಡಿ ಗ್ರಾಮ ಕೂಡುವ ರಸ್ತೆಗೆ ಹೊಂದಿ ಕೊಂಡಿರುವ ಒಡೆಯರ ತೋಟದಲ್ಲಿ ಪ್ರತಿಷ್ಠಾಪನಗೊಂಡಿರುವ ಶ್ರೀ ಶಿವಯೋಗಿ ಅಮೋಘಸಿದ್ದೇಶ್ವರರ 8ನೇ ವರ್ಷದ ಬೃಹತ್ ಜಾತ್ರಾ ಮಹೋತ್ಸವವು ಹಾಗೂ “ಸಿದ್ದರ ಭೇಟ್ಟಿ” ಮಹೋತ್ಸವವು ಬರುವ ಸೋಮವಾರ 27 ಹಾಗೂ 28ರಂದು ಎರಡು ದಿನಗಳ ವರೆಗೆ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ಜರುಗಲಿದೆ.
ಸೋಮವಾರ ದಿ: 27ರಂದು ಮುಂಜಾನೆ 6ಗಂಟೆಗೆ ಶ್ರೀ ಶಿವಯೋಗಿ ಅಮೋಘಸಿದ್ದೇಶ್ವರ ದೇವರ ಕರ್ತೃ ಗದ್ದುಗೆಗೆ ಅಭಿಷೇಕ, ರುದ್ರಭಿಷೇಕ, ಭಂಡಾರ ಪೂಜೆ, ನೈವೇದ್ಯ ಸಮರ್ಪಣೆ, ಕಂಬಳಿ ವಸ್ತ್ರಧಾರಣೆ ಜರುಗುವುದು. ಮಧ್ಯಾಹ್ನ 3ಗಂಟೆಗೆ ಅಮೋಘಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಸಿದ್ದರಬೇಟಿ ಅಳಗವಾಡಿ, ಮೊರಬ, ಸೊಲ್ಲಾಪುರ ಜಿಲ್ಲಾ ಕವಟೆ, ಬಾಗಲಕೋಟೆ ಜಿಲ್ಲಾ ಮುಗಳಖೋಡ, ಬೆಳಕೂಡ, ಹಿಡಕಲ್ಲ, ಮೊರಬ ಹೀಗೆ ಹಲವಾರು ಗ್ರಾಮಗಳಿಂದ ಆಗಮಿಸುವ ದೇವರು ಪಲ್ಲಕ್ಕಿಗಳನ್ನು ಸುಮಂಗರಿಯಂದ ಪೂರ್ಣಕುಂಭ ಆರತಿಯೊಂದಿಗೆ ಭವ್ಯ ಮೆರವಣಿಗೆಯ ಮೂಲಕ ದೇವರುಗಳ ಪಲ್ಲಕ್ಕಿಗಳು ಯಲ್ಲಮ್ಮನ ಜಗವನ್ನು ಬರಮಾಡಿಕೊಳ್ಳುವುದು ಎಲ್ಲ ಭಕ್ತರು ಭಂಡಾರ ಎರಚುತ್ತ ಹೋನ್ನಾಟದಲ್ಲಿ ಸಂಭ್ರಮಿಸುವರು. ನಂತರ ದಾಸೋಹದ ಮಹಾಮನೆಯಲ್ಲಿ ಅನ್ನ ಸಂತರ್ಪಣೆ ನೆರವೇರುವುದು. ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು ಪ್ರತಾಪರಾವ್ ಪಾಟೀಲ, ಯುವಕೇಸರಿ ಶಿವರಾಜ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಅದೇ ದಿನ ಸಂಜೆ 7ಗಂಟೆಗೆ “ಸಿದ್ದರ ಸಿದ್ದಾಟಿಕೆ” ವಿಷಯದ ಮೇಲೆ “ಧರ್ಮಸಭೆ” ಮಹಾತ್ಮರಿಂದ ಪ್ರವಚನ ಜರುಗುವುದು.
ಮಖನಾಪುರ ಗುರುಪೀಠದ ಸೋಮಲಿಂಗೇಶ್ವರ ಮಹಾರಾಜರು ಪಾವನ ಸಾನಿಧ್ಯವಹಿಸುವವರು. ಮೆಟಗುಡ್ಡ ಸಿದ್ದಾಶ್ರಮದ ಬನಸಿದ್ದ ಮಹಾರಾಜರು ಸಾನಿಧ್ಯವಹಿಸುವರು. ಹಿಡಕಲ್ಲದ ಶ್ರೀ ಹನುಮಂತ ಒಡೆಯರ ಮಹಾರಾಜರು ನೇತೃತ್ವವಹಿಸುವರು, ಬಬಲಾದಿ ಶಾಖಾ ಮಠ ಹಿಡಕಲ್ಲ ಸದಾಶಿವ ಮಹಾರಾಜರು, ಇಂಚಗೇರಿ ಮಠದ ಪ್ರದೀಪಕುಮಾರ ಘಂಟಿ ಮಹಾರಾಜರು. ಹನುಮಾಪುರ- ಕವಲಗುಡ್ಡ ಸಿದ್ದಾಶ್ರಮದ ಅಮರೇಶ್ವರ ಮಹಾರಾಜರು, ಹೆಬ್ಬಾಳಟ್ಟಿ ಸಿದ್ರಾಮ ಮಹಾರಾಜರು, ಮುಗಳಖೋಡ ಕಾಶಿಲಿಂಗ ಮಹಾರಾಜರು, ಹಡಗಿನಾಳ ಮುತ್ತೇಶ್ವರ ಸ್ವಾಮಿಗಳು, ಜೋಕಾನಟ್ಟಿ ಸಿದ್ದಾಶ್ರಮದ ಬಿಳಿಯಾನಿಸಿದ್ಧ ಮಹಾರಾಜರು ಪ್ರವಚನ ನೀಡುವರು.
ರಾತ್ರಿ 10ಗಂಟೆಗೆ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಶ್ರೀ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಹಾಗೂ ವಿಜಯಪುರ ಜಿಲ್ಲಾ ಶಿವಣಗಿ ಗ್ರಾಮದ ಶ್ರೀ ಮಾಳಿಂಗರಾಯ ಡೊಳ್ಳಿನ ಗಾಯನ ಸಂಘ ಇವರಿಂದ ತುರಸಾ- ತುರುಸಿನ ಡೊಳ್ಳಿನ ಪದಗಳ ಹಾಡುಗರಿಕೆ ಜರಗುವುದು. ಪ್ರಧಾನಗುರು ಭೀಮರಾವ್ ಘಂಟಿ, ಸಾಹಿತಿ ತುಕಾರಾಮ ವಂಟಗೂಡಿ ಕಾರ್ಯಕ್ರಮವನ್ನು ನಿರ್ವಹಣೆ ಮಾಡುವರು. ಮಂಗಳವಾರ ದಿ: 28ರಂದು ಮುಂಜಾನೆ 10ಗಂಟೆಗೆ ಪುರವಂತರಿಂದ ಒಡಪು ಹಾಗೂ ನಿಗಿನಿಗಿ ಉರಿಯುವ ಕೆಂಡದ ಮೇಲೆ ಅಗ್ನಿ ಪ್ರವೇಶ ಮಾಡುವರು. ನಂತರ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ದಾಸೋಹದ ಮಹಾಮನೆಯಲ್ಲಿ ಅನ್ನಸಂತರ್ಪಣೆ ನೆರವೇರುವುದೆಂದು ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ಮುಖ್ಯಸ್ಥರು ಮಾಳಸಿದ್ದ ಒಡೆಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9113964729, 7406479864, 7483084395 ಇವರನ್ನು ಸಂಪರ್ಕಿಸಲು ಕೋರಲಾಗಿದೆ.****************************











