ಪ್ರಕೃತಿ ಬೆಳಗಾವಿ
*ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ 20 ವರ್ಷದ ಮಹಿಳೆಗೆ ಒಂದೇ ಹೆರಿಗೆಯಲ್ಲಿ ಮೂರು ಮಕ್ಕಳ ಜನನ*

ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಜನನ!
20 ವರ್ಷದ ಯುವತಿಗೆ ಒಂದೇ ಹೆರಿಗೆಯಲ್ಲಿ ಮೂರು ಮಕ್ಕಳ ಜನನ.
ವೈದ್ಯರ ತಂಡದ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಸುರಕ್ಷಿತ ಪ್ರಸವ ತಾಯಿ ಹಾಗೂ ಮೂರು ಮಕ್ಕಳು ಆರೋಗ್ಯವಾಗಿದ್ದಾರೆ.
ಗೋಕಾಕ್ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಅಭಿನಂದನೆಗಳು.
ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಅಪರೂಪದ ಪ್ರಸವ ಪ್ರಕರಣವೊಂದು ನಡೆದಿದೆ. ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ 20 ವರ್ಷದ ರೇಣುಕಾ ಮಲ್ಲಪ್ಪ ಗಣಾಜರಿ ಅವರು ಒಂದೇ ಹೆರಿಗೆಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ವೈದ್ಯೆ ಡಾ. ಶ್ವೇತಾ ನಾಯಿಕ ಅವರ ನೇತೃತ್ವದಲ್ಲಿ ಹೆರಿಗೆ ನೆರವೇರಿದ್ದು, ತಾಯಿ ಹಾಗೂ ನವಜಾತ ಶಿಶುಗಳ ಆರೋಗ್ಯದ ಕುರಿತು ವೈದ್ಯಕೀಯ ತಂಡ ನಿಗಾ ವಹಿಸಿದೆ. ಒಂದೇ ಬಾರಿಗೆ ಮೂರು ಮಕ್ಕಳ ಜನನವಾಗಿರುವುದು ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ.***********************************






