ಪ್ರಕೃತಿ ಬೆಳಗಾವಿ
*ಸಬಲೀಕರಣದ ಹೆಜ್ಜೆಯಾಗಿ ವಿಶೇಷಚೇತನರಿಗೆ ದ್ವಿಚಕ್ರ ವಾಹನ ವಿತರಣೆ*

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ಸಚಿವರಾದ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ, ಗೋಕಾಕ ನಗರದ ಗೃಹ ಕಚೇರಿಯಲ್ಲಿ ಇಂದು ಯಮಕನಮರಡಿ ವಿಧಾನಸಭಾ ಕ್ಷೇತ್ರದ ವಿಶೇಷಚೇತನರಿಗಾಗಿ ಶಾಸಕರ ಅನುದಾನದಡಿ ಮಂಜೂರಾದ 33 ದ್ವಿಚಕ್ರ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ವಿಶೇಷಚೇತನರ ಸ್ವಾವಲಂಬನೆ, ಸುಗಮ ಸಂಚಾರ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನೆರವು ಮಹತ್ವದ ಹೆಜ್ಜೆಯಾಗಿದೆ.
ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಗೌರವ ಮತ್ತು ಸ್ವಾವಲಂಬನೆಯ ಬದುಕು ದೊರೆಯಬೇಕು ಎಂಬ ಆಶಯದೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಜನಪರ ಕಾರ್ಯಗಳು ನಿರಂತರವಾಗಿ ಸಾಗಲಿವೆ.************************************





