ಪ್ರಕೃತಿ ಬೆಳಗಾವಿ

*ಆಗಸ್ಟ್ 12 ರಂದು ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಮತ್ತು ಓದು ಕರ್ನಾಟಕ,ಜಾಗೃತಿ ಜಾಥಾ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : 12.08.26 *ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ* ಅಂಗವಾಗಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ,(KALA), ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮಾನ್ಯ ಆಯುಕ್ತರು,.ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿ ಇವರ ಸಹಯೋಗ, ಮತ್ತು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಮತ್ತು ಕೆ ಎಲ್ ಇ. ಸಂಸ್ಥೆಯ ಆರ್ ಎಲ್ ಎಸ್ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ರಾಜ್ಯಮಟ್ಟದ *ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ* ಮತ್ತು *ಓದು ಕರ್ನಾಟಕ* ಜಾಥಾ ಆಯೋಜಿಸಲಾಗಿದೆ. ಜಾಥಾಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು,ಬೆಳಗಾವಿ ಇವರು ಚಾಲನೆ ನೀಡಲಿದ್ದಾರೆ.

ಜಾಥಾ ನಗರ ಕೇಂದ್ರ ಗ್ರಂಥಾಲಯದಿಂದ ಆರಂಭವಾಗಿ, ಡಿ ಸಿ ಆಫೀಸ್, ಚನ್ನಮ್ಮ ವೃತ್ತ ಮಾರ್ಗವಾಗಿ ಸಾಗಿ ಆರ್ ಎಲ್ ಎಸ್ ಮಹಾವಿದ್ಯಾಲಯದಲ್ಲಿ ಮುಕ್ತಾಯವಾಗುತ್ತದೆ. ವೇದಿಕೆ ಕಾರ್ಯಕ್ರಮ ಆರ್ ಎಲ್ ಎಸ್ ಕಾಲೇಜಿನಲ್ಲಿ ಇರುತ್ತದೆ.
ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿಗಳು, ಶ್ರೀ ಸಿ ಎಂ ತ್ಯಾಗರಾಜ ಮತ್ತು ಮಾಜಿ ಎಂಎಲ್ಸಿ ಶ್ರೀ ಮಹಾಂತೇಶ ಕವಟಗಿಮಠ ಅವರು ಆಗಮಿಸಲಿದ್ದು, ಅಥಿತಿಗಳಾಗಿ ಡಾ.ಸಂತೋಷ್ ಕಾಮಗೌಡ, ರಿಜಿಸ್ಟ್ರಾರ್, ಕೆ ಆರ್ ಸಿ ಯು, ಡಾ.ಪಿ ವೈ ರಾಜೇಂದ್ರಕುಮಾರ, ಡಾ. ಎಸ್ ಎಲ್ ಕಾಡದೇವರಮಠ.

(ರಾಜ್ಯಾಧ್ಯಕ್ಷರು,ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ.KALA ಬೆಂಗಳೂರು,), ಶ್ರೀ ಪಿ ವಿ ಕೊಣ್ಣೂರ(ಅಧ್ಯಕ್ಷರು,ಎಲ್ ಐ ಎಸ್ ಅಕಾಡೆಮಿ, ಬೆಂಗಳೂರು),ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ ಉಪನಿರ್ದೇಶಕರು ಶ್ರೀ ರಾಮಯ್ಯ, ಶ್ರೀ ಶೇಖರ್ ಎಚ್ ಪಿ(ರಾಜ್ಯ ಪ್ರಧಾನ ಕಾರ್ಯದರ್ಶಿಗಳು.KALA),ಆಗಮಿಸಲಿದ್ದಾರೆ. , ಡಾ.ಕಿರಣ ಸವಣೂರು,ಡಾ.ಜ್ಯೋತಿ ಕಾವಳೆಕರ್, ಪ್ರಾಚಾರ್ಯರು, ಕೆ ಎಲ್ ಇ.ಸಂಸ್ಥೆಯ ಆರ್ ಎಲ್ ಎಸ್ ಮಹಾವಿದ್ಯಾಲಯ, ಬೆಳಗಾವಿ, ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿ ಉಪನಿರ್ದೇಶಕರು ಶ್ರೀ ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ, ಬೆಳಗಾವಿ ಘಟಕದ ಅಧ್ಯಕ್ಷ ಡಾ.ಭರತ ಅಲಸಂದಿ ಮತ್ತು ರಾಜ್ಯದ ಎಲ್ಲ KALA ದ ಅಧ್ಯಕ್ಷರು, ಸದಸ್ಯರು,ಗ್ರಂಥಪಾಲಕರು ಹಾಜರಿರುತ್ತಾರೆ.

ಸದರಿ ಕಾರ್ಯಕ್ರಮದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರಿಗೆ ಕರ್ನಾಟಕ ಗ್ರಂಥಾಲಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವದು.******************************

Leave a Reply

Your email address will not be published. Required fields are marked *

Back to top button