*ಪ್ರತಿಭಾ ಪುರಸ್ಕಾರ–ಪದಗ್ರಹಣ ಸಮಾರಂಭದಲ್ಲಿ ಸನ್ಮಾನ; ಶಿಕ್ಷಕರ ಸಂಘದ ಪದಾಧಿಕಾರಿಗಳಿಂದ ಅಭಿನಂದನೆ*

*ಲಕ್ಷ್ಮೇಶ್ವರದ ಮೂವರು ಶಿಕ್ಷಕರು ಜಿಲ್ಲಾ ಸಂಘಕ್ಕೆ ನಾಮನಿರ್ದೇಶಿತ*
ಪ್ರಕೃತಿ ಬೆಳಗಾವಿ ಸುದ್ದಿ : ಲಕ್ಷ್ಮೇಶ್ವರ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಂಗಳೂರು, ಗದಗ ಗ್ರಾಮೀಣ ಹಾಗೂ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಪದಗ್ರಹಣ ಹಾಗೂ ಧನ್ಯತೆ ಸಮರ್ಪಣಾ ಸಮಾರಂಭ–2026ರಲ್ಲಿ ಲಕ್ಷ್ಮೇಶ್ವರ ತಾಲೂಕಿನ ಮೂವರು ಶಿಕ್ಷಕರನ್ನು ಗದಗ ಜಿಲ್ಲಾ ಘಟಕಕ್ಕೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಲಕ್ಷ್ಮೇಶ್ವರ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಭರಮಗೌಡ್ರ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಂದೆಣ್ಣವರ, ಸಹಕಾರ್ಯದರ್ಶಿ ಎಸ್.ವಿ. ಸೋಗಿ ಹಾಗೂ ಸಂಘಟನಾ ಕಾರ್ಯದರ್ಶಿ ಮುತ್ತಣ್ಣ ಹುಬ್ಬಳ್ಳಿ ಅವರ ಸಹಕಾರದಲ್ಲಿ ಶಿವಾನಂದ ಅಸುಂಡಿ, ಫಕ್ಕಿರೇಶ ತಳವಾರ ಹಾಗೂ ಅಶೋಕ ಅರಗಂಜಿ ಅವರು ಗದಗ ಜಿಲ್ಲಾ ಘಟಕಕ್ಕೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ನೂತನವಾಗಿ ನಾಮನಿರ್ದೇಶಿತರಾದ ಮೂವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಶಿಕ್ಷಕರು ಶಿಕ್ಷಣ ಕ್ಷೇತ್ರದ ಜೊತೆಗೆ ಸಂಘಟನೆಯ ಮೂಲಕವೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ, ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಸದಸ್ಯ ಎಂ.ಎಸ್. ಹಿರೇಮಠ, ಶಿರಹಟ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸವಗೌಡ ಪಾಟೀಲ, ಸಿದ್ದು ಮಠದ, ಪರಮೇಶ್ವರ ಕಾಳಶೆಟ್ಟಿ, ಯಲ್ಲಪ್ಪ ತಿರಕಣ್ಣವರ, ಎಸ್.ಎಫ್. ಸುಣಗಾರ, ಫಕ್ಕಿರೇಶ ಡಂಬಳ, ಹಂಜಗಿ, ಗಿರೀಶ ನೇಕಾರ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ನಾಮನಿರ್ದೇಶಿತರಾದ ಶಿವಾನಂದ ಅಸುಂಡಿ, ಫಕ್ಕಿರೇಶ ತಳವಾರ ಹಾಗೂ ಅಶೋಕ ಅರಗಂಜಿ ಅವರಿಗೆ ಶಿಕ್ಷಕ ವೃಂದ ಹಾಗೂ ಸಂಘದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.*************************************






