ಪ್ರಕೃತಿ ಬೆಳಗಾವಿ

*ಅನಾಥ ಮಕ್ಕಳಿಗೆ ಬೆಳ್ಳಿ ವಸ್ತು ನೀಡಿ ಸೋದರ ಮಾವನಾದ ಸಮಾಜ ಸೇವಕ ಆಕಾಶ ಹಲಗೇಕರ್*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಅನಾಥ ಮಕ್ಕಳಿಗೆ ಬೆಳ್ಳಿ ವಸ್ತುಗಳನ್ನು ನೀಡಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ಸಮಾಜ ಸೇವಕ ಆಕಾಶ ಹಲಗೇಕರ್.

ಸಮಾಜ ಸೇವೆಯ ಮೂಲಕ ಜನಮನ ಗೆದ್ದಿರುವ *ಸಮಾಜ ಸೇವಕ ಆಕಾಶ ಹಲಗೇಕರ್* ಅವರು ತಮ್ಮ ಹುಟ್ಟು ಹಬ್ಬವನ್ನು ಅತ್ಯಂತ ಅರ್ಥಪೂರ್ಣ ಹಾಗೂ ಸರಳ ರೀತಿಯಲ್ಲಿ ಆಚರಿಸಿಕೊಂಡರು. ವೈಭವದ ಆಚರಣೆ, ಆಡಂಬರದ ಕಾರ್ಯಕ್ರಮಗಳು ಮತ್ತು ಅನಗತ್ಯ ಖರ್ಚುಗಳಿಗೆ ದೂರವಿದ್ದು, ಅನಾಥ ಮಕ್ಕಳ ಮುಖದಲ್ಲಿ ಸಂತಸ ಮೂಡಿಸುವ ಉದ್ದೇಶದಿಂದ ಮಕ್ಕಳಿಗೆ *ಬೆಳ್ಳಿ ವಸ್ತುಗಳನ್ನು* ವಿತರಿಸಿ ತಮ್ಮ ಜನ್ಮದಿನವನ್ನು ವಿಶೇಷಗೊಳಿಸಿದರು.

ಈ ಸಂದರ್ಭದಲ್ಲಿ ಅನಾಥ ಆಶ್ರಮಕ್ಕೆ ಭೇಟಿ ನೀಡಿದ ಆಕಾಶ ಹಲಗೇಕರ್ ಅವರು ಮಕ್ಕಳೊಂದಿಗೆ ಆತ್ಮೀಯವಾಗಿ ಸಮಯ ಕಳೆಯುವುದರ ಜೊತೆಗೆ ಅವರ ಯೋಗಕ್ಷೇಮ ವಿಚಾರಿಸಿದರು. ನಂತರ ಪ್ರತಿಯೊಬ್ಬ ಮಗುವಿಗೂ ಬೆಳ್ಳಿ ವಸ್ತುಗಳನ್ನು ನೀಡಿ ಶುಭಾಶಯಗಳನ್ನು ತಿಳಿಸಿದರು. ಅವರ ಈ ಮಾನವೀಯ ಕಾರ್ಯದಿಂದ ಮಕ್ಕಳು ಸಂತೋಷಗೊಂಡರು.

“ಹುಟ್ಟು ಹಬ್ಬ ಎಂದರೆ ಕೇವಲ ಕೇಕ್ ಕತ್ತರಿಸುವುದು ಅಥವಾ ಸಂಭ್ರಮಿಸುವುದು ಮಾತ್ರವಲ್ಲ. ಸಮಾಜಕ್ಕೆ ಉಪಯೋಗವಾಗುವ ಒಂದು ಸಣ್ಣ ಸೇವೆ ಮಾಡಿದರೆ ಅದೇ ನಿಜವಾದ ಸಂಭ್ರಮ” ಎಂಬ ಸಂದೇಶವನ್ನು ಅವರು ತಮ್ಮ ನಡೆ ಮೂಲಕ ಸಾರಿದರು.

ಈ ಸೇವಾ ಕಾರ್ಯಕ್ಕೆ ಹಲವಾರು ಗಣ್ಯರು, ಸ್ನೇಹಿತರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಇಂತಹ ಮಾನವೀಯ ಕಾರ್ಯಗಳು ಹೆಚ್ಚಾಗಬೇಕು ಎಂದು ಆಶಿಸಿದರು. ಆಕಾಶ ಹಲಗೇಕರ್ ಅವರ ಈ ಸಮಾಜಮುಖಿ ಕಾರ್ಯವು ಯುವಕರಿಗೆ ಮಾದರಿಯಾಗಿದ್ದು, ಜನ್ಮದಿನವನ್ನು ಸೇವಾ ದಿನವನ್ನಾಗಿ ಆಚರಿಸುವ ಉತ್ತಮ ಸಂಪ್ರದಾಯಕ್ಕೆ ಪ್ರೇರಣೆಯಾಗಿದೆ.

ಈ ಸಂದರ್ಭದಲ್ಲಿ ಆಕಾಶ್ ಹಲಗೇಕರ್, ದೀಪಕ್ ಕೇತಕರ್, ಭಾವಕೇಶ್ ಪಿರಗಣ್ಣವರ್, ಪರಶುರಾಮ ಮಂಗಣ್ಣವರ್, ಶ್ವೇತಾ ಕೋಟ್ಯಾನ್, ಶಿಲ್ಪಾ ಮಠಪತಿ, ಮಹಾಂತೇಶ್ ಕೋಲಕಾರ, ಕಿರಣ ಶಿಂದೊಳಿಕರ,ಶಶಿಕುಮಾರ್ ಹುಲ್ಲೊಳ್ಳಿ, ಶ್ರೀ ಮಂಗಣ್ಣವರ್, ರಾಜಕುಮಾರ್ ರಾಠೋಡ, ಸಿದ್ಧಾರ್ಥ ಸಂಪಗಾವಿ ಮುಂತಾದವರು ಈ ಶುಭ ಸಂದರ್ಭಕ್ಕೆ ಸಾಕ್ಷಿಯಾದರು.

*ದೇವರ ಅನ್ನ ಫೌಂಡೇಶನ್* ವತಿಯಿಂದ ಸಮಾಜ ಸೇವಕ *ಆಕಾಶ ಹಲಗೇಕರ್* ಅವರಿಗೆ ಹೃತ್ಪೂರ್ವಕ ಹುಟ್ಟು ಹಬ್ಬದ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಸಮಾಜ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸುತ್ತೇವೆ.*********************************

Leave a Reply

Your email address will not be published. Required fields are marked *

Back to top button